ಗಾಝಾ ನಾಗರಿಕರಿಗೆ ಪ್ರವೇಶ ನಿರಾಕರಿಸಿರುವ ಇಸ್ಲಾಮಿಕ್ ದೇಶಗಳ ವಿರುದ್ಧ ನಿಕ್ಕಿ ಹಾಲೆ ಕಿಡಿ

Prasthutha|

ನ್ಯೂಯಾರ್ಕ್: ಸ್ವಂತ ನಾಡನ್ನು ಆಕ್ರಮಿಸಿ ಅಕ್ರಮ ಎಸಗುತ್ತಿರುವ ಇಸ್ರೇಲ್ ವಿರುದ್ಧ ಹಮಾಸ್ ಸಿಡಿದೆದ್ದಿದ್ದು, ಪ್ರತಿಯಾಗಿ ಗಾಝಾಪಟ್ಟಿಯ ನಾಗರಿಕರನ್ನು ಇಸ್ರೇಲ್ ಹಿಂಸಿಸುತ್ತಿದೆ. ಇಸ್ರೇಲ್
ಹಮಾಸ್ ನಡುವಿನ ಯುದ್ಧದಿಂದಾಗಿ ಗಾಝಾ ನಾಗರಿಕರು ತಮ್ಮ ಮನೆಗಳನ್ನು ತೊರೆದು ಹೋಗುತ್ತಿದ್ದಾರೆ. ಗಾಝಾದ ಈ ನಾಗರಿಕರಿಗೆ ಪ್ರವೇಶ ನಿರಾಕರಿಸಿರುವ ಇಸ್ಲಾಮಿಕ್ ರಾಷ್ಟ್ರಗಳನ್ನು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಭಾರತೀಯ ಮೂಲದ ನಿಕ್ಕಿ ಹಾಲೆ ಟೀಕಿಸಿದ್ದಾರೆ.

- Advertisement -

ಇರಾನ್ ಪರಮಾಣು ಒಪ್ಪಂದದ ಬಗ್ಗೆ ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಮತ್ತು ಹಾಲಿ ಅಧ್ಯಕ್ಷ ಜೋ ಬೈಡನ್ ಅವರ ವಿರುದ್ಧವೂ ನಿಕ್ಕಿ ಹಾಲೆ ವಾಗ್ದಾಳಿ ನಡೆಸಿದ್ದಾರೆ. ಸಿಎನ್ ಎನ್ ಗೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ನಿಕ್ಕಿ ಹಾಲೆ, “ನಾವು ಮುಗ್ದರಾದ ಪ್ಯಾಲೆಸ್ತೈನ್ ಪ್ರಜೆಗಳ ಬಗ್ಗೆ ಕಾಳಜಿ ವಹಿಸಬೇಕು ಎಂದಿದ್ದಾರೆ. ಆದರೆ ಅರಬ್ ದೇಶಗಳು ಎಲ್ಲಿವೆ, ಅವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನಾವು ಈಜಿಪ್ಟ್ಗೆ ವರ್ಷಕ್ಕೆ ಒಂದು ಬಿಲಿಯನ್ ಡಾಲರ್ಗಳನ್ನು ನೀಡುತ್ತೇವೆ ಎಂದು ನಿಮಗೆ ತಿಳಿದಿದೆಯೇ? ಅವರು ಗಾಝಾದ ನಾಗರಿಕರಿಗೆ ಏಕೆ ಪ್ರವೇಶ ನೀಡುತ್ತಿಲ್ಲ? ಎಂದು ನಿಕ್ಕಿ ಹಾಲೆ ಕಿಡಿ ಕಾರಿದ್ದಾರೆ.

Join Whatsapp