ಸಂಸ್ಕೃತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮುಹಮ್ಮದ್ ಇರ್ಫಾನ್

Prasthutha|

ಲಖನೌ: ಸಂಸ್ಕೃತ ಶಿಕ್ಷಾ ಪರಿಷತ್ ಮಂಡಳಿಯ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತರಪ್ರದೇಶದ ಚಂದೌಲಿಯ ಮುಹಮ್ಮದ್ ಇರ್ಫಾನ್ 82.7% ಅಂಕಗಳನ್ನು ಗಳಿಸಿ ಸುಮಾರು 14,000 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.

- Advertisement -


ಈ ಬಗ್ಗೆ ಇರ್ಫಾನ್ ಮಾತನಾಡಿದ್ದು, ಶಾಸ್ತ್ರಿ (ಬಿಎ ಪದವಿಗೆ ಸಮಾನಾಂತರ) ಹಾಗೂ ಆಚಾರ್ಯ (ಎಂಎ ಪದವಿಗೆ ಸಮಾನಾಂತರ) ವ್ಯಾಸಂಗ ಮಾಡಲು ನಾನು ಉದ್ದೇಶಿಸಿದ್ದು, ಅವು ಪೂರ್ಣಗೊಂಡ ನಂತರ ಸಂಸ್ಕೃತ ಶಿಕ್ಷಕನಾಗಿ ಉದ್ಯೋಗ ಮಾಡುವ ಹಂಬಲ ಹೊಂದಿದ್ದೇನೆ ಎಂದು ತಿಳಿದ್ದಾರೆ.

ಇನ್ನು ಇರ್ಫಾನ್ ತಂದೆ ಸಲಾವುದ್ದೀನ್ ಮಾತನಾಡಿ, ನಾನು ದಿನಗೂಲಿ 300 ರೂ. ಗಳಿಸುವ ಕೃಷಿ ಕಾರ್ಮಿಕನಾಗಿದ್ದು, ಪ್ರತಿ ತಿಂಗಳು ಕೆಲವು ದಿನಗಳವರೆಗೆ ಕೆಲಸ ಮಾಡುತ್ತಿದ್ದೇನೆ. ಇರ್ಫಾನ್ ನನ್ನು ಖಾಸಗಿ ಅಥವಾ ಬೇರೆ ಯಾವುದೇ ಶಾಲೆಗೆ ಕಳುಹಿಸಲು ನನಗೆ ಸಾಧ್ಯವಾಗಲಿಲ್ಲ.ಇದೀಗ ಸಂಸ್ಖೃತ ಶಾಲೆಗೆ ಸೇರಿಸಿರುವುದು ಸಂತಸ ತಂದಿದೆ ಎಂದರು.

Join Whatsapp