ದೇಶದ ಮುಗ್ಧ ಜನರ ರಕ್ತವನ್ನು ಮೊಸಳೆ ಕಣ್ಣೀರಿನಿಂದ ಅಳಿಸಲಾಗದು : ಮೋದಿಯ #CrocodileTears ಟ್ರೆಂಡ್‌!

Prasthutha|

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರದಂದು ತಾವು ಲೋಕಸಭೆಯಲ್ಲಿ ಪ್ರತಿನಿಧಿಸುವ ವಾರಣಾಸಿಯ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೊ ಕಾನ್ಪರೆನ್ಸ್‌ ಮೂಲಕ ಮಾತನಾಡಿದ್ದಾರೆ. ಈ ವೇಳೆ ಸಾಂಕ್ರಮಿಕದಿಂದ ಮೃತಪಟ್ಟವರನ್ನು ನೆನೆದು ಭಾವುಕರಾಗಿದ್ದು, ನೆಟ್ಟಿಗರು ಇದನ್ನು ಮೊಸಳೆ ಕಣ್ಣೀರು ಎಂದು ಬಣ್ಣಿಸಿದ್ದು ಇದೀಗ ಟ್ವಿಟರ್‌ನಲ್ಲಿ #CrocodileTears ಹ್ಯಾಶ್‌‌ಟ್ಯಾಗ್‌ ಟ್ರೆಂಡ್ ಆಗಿದೆ.

- Advertisement -


ಇಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ನಮ್ಮಿಂದ ಹಲವು ಪ್ರೀತಿಪಾತ್ರರನ್ನು ಕಸಿದುಕೊಂಡಿದೆ. ಕೊರೊನಾದಿಂದ ನಿಧನರಾದವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬದವರಿಗೆ ನನ್ನ ಸಂತಾಪಗಳನ್ನೂ ಸೂಚಿಸುತ್ತೇನೆ’ ಎಂದು ಹೇಳಿದ್ದಾರೆ. ಈ ಮಾತಿನ ವೇಳೆ ಭಾವುಕರಾದ ಮೋದಿ, ಅಳುತಡೆಯಲು ಪ್ರಯತ್ನಿಸಿದಂತೆ ಮಾಡಿದರು.


ಆದರೆ ನೆಟ್ಟಿಗರು ಪ್ರಧಾನಿಯನ್ನು ಟೀಕಿಸಿದ್ದು, ಇದನ್ನು ಮೊಸಳೆ ಕಣ್ಣೀರು ಎಂದು ಕರೆದಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿರುವಾಗ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರಕ್ಕೆ ತೆರಳಿ, ‘ದೀದಿ ಓ ದೀದಿ’ ಎಂದವರು, ಕೊರೊನಾ ಹೆಚ್ಚಿದ್ದರೂ ಸಮಾವೇಶದಲ್ಲಿ ನೆರೆದ ಲಕ್ಷಾಂತರ ಜನರನ್ನು ನೋಡಿ ಖುಷಿ ಪಟ್ಟವರು ಇದೀಗ ಕೊರೊನಾ ಪ್ರಕರಣ ಇಳಿಮುಖವಾಗುತ್ತಿದ್ದಂತೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp