ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಭ್ಯ | ಯಾರಿಗೆ ಎಲ್ಲೆಲ್ಲಿ ಲಸಿಕೆ ? ಮಾಹಿತಿ

Prasthutha|

►ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ

- Advertisement -

ಜಿಲ್ಲೆಗೆ ನಿಯಮಿತವಾಗಿ ಕೋವ್ಯಾಕ್ಸಿನ್ ಸರಬರಾಜು ಆಗಿದ್ದು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಆಯ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿತರಿಸಲಾಗಿದೆ.  ಮೊಬೈಲ್ ಸಂದೇಶ  ಸಿಕ್ಕಿದ ಫಲಾನುಭವಿಗಳು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ, ದೂರವಾಣಿ ಮೂಲಕ ಕರೆ ಬಂದ ಫಲಾನುಭಾವಿಗಳು  ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಪಡೀಲ್, ಬಿಜೈ, ಜೆಪ್ಪು, ಸುರತ್ಕಲ್, ಕುಳಾಯಿ, ಕುಂಜತ್ತ್‍ಬೈಲ್ ಗಳಲ್ಲಿ ಹಾಗೂ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಈಗಾಗಲೇ ಪ್ರಥಮ ಡೋಸ್ ಪಡೆದುಕೊಂಡ ಫಲಾನುಭವಿಗಳು 2ನೇ ಡೋಸ್ ಪಡೆಯಲು ಅರ್ಹರಿದ್ದಲ್ಲಿ ತಮ್ಮ ಹತ್ತಿರದ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp