ಪ್ರಧಾನಿ ಮೋದಿ ಭಾಷಣ | ಯೂಟ್ಯೂಬ್ ನಲ್ಲಿ ಮತ್ತೊಮ್ಮೆ ಕೆಲವೇ ಗಂಟೆಗಳಲ್ಲಿ ಸಾವಿರಾರು ಡಿಸ್ ಲೈಕ್ಸ್!

Prasthutha|

ನವದೆಹಲಿ : ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಸೋಮವಾರ ಆಯೋಜಿಸಿದ್ದ ರಾಜ್ಯಪಾಲರುಗಳ ಸಮ್ಮೇಳನವನ್ನು ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿರುವ ಯೂಟ್ಯೂಬ್ ವೀಡಿಯೊಗೆ ಮತ್ತೊಮ್ಮೆ ಭಾರಿ ಡಿಸ್ ಲೈಕ್ ವ್ಯಕ್ತವಾಗಿದೆ. ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಈ ಕಾರ್ಯಕ್ರಮ ಲೈವ್ ಆಗಿತ್ತು. ಕಾರ್ಯಕ್ರಮ ಪ್ರಸಾರಗೊಂಡ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ 30 ಸಾವಿರಕ್ಕೂ ಹೆಚ್ಚು ಡಿಸ್ ಲೈಕ್ ಗಳನ್ನು ಒತ್ತಲಾಗಿದೆ. ಇದೇ ವೇಳೆ ಲೈಕ್ ಗಳ ಸಂಖ್ಯೆ ಕೇವಲ 4 ಸಾವಿರ ಮಾತ್ರ ಇದೆ

- Advertisement -

ಕೆಲವೇ ದಿನಗಳ ಹಿಂದೆ, ಪ್ರಧಾನಿ ಮೋದಿಯವರ ‘ಮನ್ ಕೀ ಬಾತ್’ ಭಾಷಣದ ಆಡಿಯೊ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಲ್ಲಿ ಪೋಸ್ಟ್ ಮಾಡಲಾಗಿತ್ತೋ, ಅಲ್ಲೆಲ್ಲಾ ಭಾರೀ ಪ್ರಮಾಣದ ಡಿಸ್ ಲೈಕ್ ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಬಿಜೆಪಿಯ ಅಧಿಕೃತ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾದ ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ಭಾಷಣಕ್ಕೆ 10 ಲಕ್ಷಕ್ಕೂ ಹೆಚ್ಚು ಡಿಸ್ ಲೈಕ್ ಗಳು ವ್ಯಕ್ತವಾಗಿದ್ದವು. ಪ್ರಧಾನಿ ಮೋದಿ ಅವರಿಗೆ ಸಂಬಂಧಿಸಿದ ಇತರ ಪುಟಗಳಲ್ಲೂ ಲಕ್ಷಾಂತರ ಡಿಸ್ ಲೈಕ್ ಗಳು ವ್ಯಕ್ತವಾಗಿದ್ದವು. ಅಲ್ಲದೆ, ಸಾವಿರಾರು ಟೀಕೆಗಳು ಕಾಮೆಂಟ್ ಗಳಲ್ಲಿ ವ್ಯಕ್ತವಾಗಿದ್ದವು.

ಅಗತ್ಯ ವಿಷಯಗಳ ಬಗ್ಗೆ ಮಾತನಾಡದೆ, ಅನಗತ್ಯ ವಿಷಯಗಳ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿಯು ಅತಿದೊಡ್ಡ ಸಾಮಾಜಿಕ ಜಾಲತಾಣ ಬಳಕೆದಾರರ ಬೆಂಬಲವಿದೆ ಎಂದು ಹೇಳುತ್ತಿದ್ದರೂ, ಪ್ರಧಾನಿ ಮೋದಿ ಅವರ ಭಾಷಣಕ್ಕೆ ಸಿಗುತ್ತಿರುವ ಡಿಸ್ ಲೈಕ್ ಗಳು, ಜನರು ಆಡಳಿತಾರೂಢ ಸರಕಾರದಿಂದ ಬೇಸತ್ತು, ತಮ್ಮ ನಿಲುವು ಬದಲಿಸುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡಲಾರಂಭಿಸಿದೆ.

Join Whatsapp