ಇಸ್ರೇಲ್ – ಅರಬ್ ಮೈತ್ರಿ ಕುರಿತ ಮಾತುಕತೆ | ಹಿಝ್ಬುಲ್ಲಾ, ಹಮಾಸ್ ಮುಖ್ಯಸ್ಥರ ಭೇಟಿ

Prasthutha|

ಬೈರುತ್ : ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ರಾಜತಾಂತ್ರಿಕ ಸಹಜಸ್ಥಿತಿ ಕಾಪಾಡುವ ಕುರಿತು ಲೆಬನಾನ್ ನ ಹಿಝ್ಬುಲ್ಲಾ ಚಳವಳಿ ಮತ್ತು ಫೆಲೆಸ್ತೀನಿಯನ್ ಹಮಾಸ್ ಗ್ರೂಪ್ ನ ಮುಖ್ಯಸ್ಥರು ಮಾತುಕತೆ ನಡೆಸಿದ್ದಾರೆ ಎಂದು ಚಳವಳಿಯ ಮೂಲಗಳು ತಿಳಿಸಿವೆ.

- Advertisement -

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯ ಅವರಿಗೆ ಲೆಬನಾನ್ ನ ಅತಿದೊಡ್ಡ ಫೆಲೆಸ್ತೀನಿಯನ್ ನಿರಾಶ್ರಿತರ ಶಿಬಿರ ಐನ್ ಅಲ್-ಹೆಲ್ವೇಗೆ ಅದ್ದೂರಿಯ ಸ್ವಾಗತ ಕೋರಲಾಯಿತು.

ಇರಾನ್ ಬೆಂಬಲಿತ ಶಿಯಾ ಹಿಝ್ಬುಲ್ಲಾ ಚಳವಳಿಯ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಹನಿಯ ನಡುವೆ ಮಾತುಕತೆ ನಡೆದಿದ್ದು, ಈ ವೇಳೆ ಇಸ್ರೇಲ್ ವಿರುದ್ಧದ ಪ್ರತಿರೋಧದ ತೀವ್ರತೆಯಲ್ಲಿ ಸ್ಥಿರತೆಯನ್ನು ಕಾಪಾಡಬೇಕೆಂದು ಇಬ್ಬರು ನಾಯಕರು ಒತ್ತಿ ಹೇಳಿದರು ಎಂದು ಹಿಝ್ಬುಲ್ಲಾ ಬೆಂಬಲಿತ ಅಲ್-ಮನಾರ್ ಟಿವಿ ವರದಿ ಮಾಡಿದೆ.

- Advertisement -

ಫೆಲೆಸ್ತೀನ್, ಲೆಬನಾನ್ ಮತ್ತು ಪ್ರದೇಶದ ರಾಜಕೀಯ ಮತ್ತು ಸೇನಾ ಬೆಳವಣಿಗೆಗಳ ಕುರಿತಂತೆ ಅವರು ಚರ್ಚಿಸಿದರು. ಇಸ್ರೇಲ್ ನೊಂದಿಗೆ ಸಹಜಸ್ಥಿತಿ ಕಾಪಾಡುವ ಅರಬ್ ಯೋಜನೆಗಳು ಸೇರಿದಂತೆ, ಫೆಲೆಸ್ತೀನಿಯನ್ ವಿಷಯದಲ್ಲಿ ಅಪಾಯಕಾರಿಯಾದ ಅಂಶಗಳ ಕುರಿತಂತೆ ಅವರು ಮಾತುಕತೆ ನಡೆಸಿದರು.

ಯುಎಇ ಮತ್ತು ಇಸ್ರೇಲ್ ನಡುವಿನ ಮೈತ್ರಿ ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಆ.13ರಂದು ಘೋಷಣೆಯಾದ ಬಳಿಕ ಈ ಮಾತುಕತೆ ನಡೆದಿದೆ. ಹನಿಯ ಲೆಬನಾನ್ ಗೆ ಮೂವತ್ತು ವರ್ಷಗಳ ಬಳಿಕ ಆಗಮಿಸಿದ್ದಾರೆ.

Join Whatsapp