ಪ್ರಧಾನಿ ಮೋದಿ ನಿದ್ರಿಸುವುದು ಎರಡೇ ಗಂಟೆ ಎಂದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ !

Prasthutha|

ಮುಂಬೈ: ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ಎರಡೇ ಗಂಟೆ ನಿದ್ರೆ ಮಾಡುತ್ತಾರೆ, ಉಳಿದ 22 ಗಂಟೆ ದೇಶಕ್ಕಾಗಿ ವ್ಯಯಿಸುತ್ತಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ಕೇವಲ 2 ಗಂಟೆ ನಿದ್ರೆ ಮಾಡುತ್ತಿದ್ದು, ದೇಶಕ್ಕಾಗಿ 22 ಗಂಟೆ ಕೆಲಸ ಮಾಡುತ್ತಿದ್ದಾರೆ. ಅದಲ್ಲದೇ ಅವರು ನಿದ್ರೆಯೇ ಮಾಡದೇ ಪ್ರತಿ ನಿಮಿಷವೂ ದೇಶ ಸೇವೆ ಮಾಡುವ ಯೋಚನೆಯಲ್ಲಿರುತ್ತಾರೆ ಎಂದಿದ್ದಾರೆ.

- Advertisement -

ಬಿಜೆಪಿ ಕಾರ್ಯಕರ್ತರೊಂದಿಗೆ ಕೋಲಾಪುರದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಚಂದ್ರಕಾಂತ್‌ ಪಾಟೀಲ್‌, ಪ್ರಧಾನಿ ಮೋದಿ ಒಂದು ಕ್ಷಣವನ್ನೂ ಹಾಳು ಮಾಡಲು ಇಷ್ಟಪಡುವುದಿಲ್ಲ, ಆ ಉದ್ದೇಶದಿಂದಲೇ ಮೋದಿ ನಿದ್ರೆಯನ್ನು ತ್ಯಜಿಸಿ 24 ಗಂಟೆಯೂ ದೇಶಕ್ಕಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಿರಂತರ ಕಲಸ ಮಾಡುವ ಕಾರಣದಿಂದಲೇ ದೇಶದ ನಾನಾ ಭಾಗಗಳಲ್ಲಿ ಉಂಟಾಗುವ ಅಹಿತಕರ ಘಟನೆಗಳ ಬಗ್ಗೆ ಮೋದಿಗೆ ಮಾಹಿತಿ ಲಭಿಸುತ್ತದೆ ಎಂದು ಹೇಳಿದ್ದಾರೆ.

Join Whatsapp