ಕಾಶ್ಮೀರ ದಾಳಿ ಅದು ಕಾಶ್ಮೀರಿಗರ ಮೇಲಿನ ದಾಳಿ: ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ಬೃಂದಾ ಕಾರಟ್

Prasthutha|

ಮಂಗಳೂರು: ವಿವಾದಿತ ಬಾಲಿವುಡ್ ‘ದಿ ಕಾಶ್ಮೀರ್ ಫೈಲ್ಸ್’ಗೆ ಚಿತ್ರದ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್, ಕಾಶ್ಮೀರ ಘಟನೆ ಇತಿಹಾಸದ ಕರಾಳ ಅಧ್ಯಾಯ ಎಂದಿದ್ದಾರೆ. ಈ ಘಟನೆಯಲ್ಲಿ ಕಾಶ್ಮೀರ ಪಂಡಿತರು ಮಾತ್ರ ಸಂಕಷ್ಟ ಅನುಭವಿಸಿದ್ದಲ್ಲ, ಎಲ್ಲ ಸಮುದಾಯದವರೂ ದಾಳಿಗೊಳಗಾಗಿದ್ದಾರೆ ಎಂದರು.

- Advertisement -

ಕಾಶ್ಮೀರದ ದಾಳಿ ಅದು ಕಾಶ್ಮೀರಿಗರ ಮೇಲಿನ ದಾಳಿಯಾಗಿತ್ತು, ಪಾಕಿಸ್ತಾನ ಉಗ್ರಗಾಮಿಗಳಿಂದ ಅಲ್ಲಿದ್ದವರೆಲ್ಲರೂ ಮನೆ ತೊರೆಯುವಂತಾಗಿತ್ತು. ಯಾರೆಲ್ಲ ಅವರ ವಿರುದ್ಧ ಇದ್ದರೋ ಅವರ ಮೇಲೆ ದೌರ್ಜನ್ಯ ನಡೆದಿದೆ. ದಾಳಿ ಮುಸ್ಲಿಮರ ಮೇಲೂ ನಡೆದಿತ್ತು. ಆದರೆ ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಸತ್ಯವನ್ನು ಮುಚ್ಚಲಾಗಿದೆ. ‘ಕಾಶ್ಮೀರ ಫೈಲ್ಸ್’ ಸಿನೆಮಾ ನೈಜತೆಯನ್ನು ತೋರಿಸುತ್ತಿಲ್ಲ ಎಂದು ಬೃಂದಾ ಆರೋಪಿಸಿದರು.

ಚಿತ್ರದ ಮೂಲಕ ಧರ್ಮಗಳ‌ ನಡುವೆ ದ್ವೇಷ ಬಿತ್ತುವ ಕೆಲಸ ಆಗಿದ್ದು, ಪಂಡಿತರಿಗೆ ನ್ಯಾಯ ಸಿಗಬೇಕಿದೆ, ಅವರೆಲ್ಲರೂ ಮರಳಿ ವಾಪಸ್ ತೆರಳಬೇಕಿದೆ ಎಂದರು. ಕಾಶ್ಮೀರ ರಕ್ತಪಾತ ಎಲ್ಲರ ಮೇಲೆ ನಡೆದ ದಾಳಿಯಾಗಿತ್ತು ಆದರೆ ಇದನ್ನು ಕೋಮು ವಿಷಯವಾಗಿ ಬಿಂಬಿಸಲಾಗಿದೆ, ಕಾಶ್ಮೀರದಲ್ಲಿ ಅಲ್ಲಿದ್ದ ಸಂಸ್ಕೃತಿಯ ಮೇಲಿನ ದಾಳಿಯಾಗಿತ್ತು ಎಂದು ಹೇಳಿದ್ದಾರೆ.

- Advertisement -

ಭವಿಷ್ಯದಲ್ಲಿ ಕೇಸರಿ ರಾಷ್ಟ್ರಧ್ವಜವಾಗಬಹುದು ಎಂದು ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಬೃಂದಾ ಕಾರಟ್, RSS ಎಂದಿಗೂ ಭಾರತದ ಸಂವಿಧಾನ ಒಪ್ಪಿಲ್ಲ, RSS ಸ್ವಾತಂತ್ರ್ಯ ಹೋರಾಟವನ್ನೇ ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದು, ಆರೆಸ್ಸಿಸಿ ನ ಸಿಂಗಲ್ ಪರ್ಸನ್ ದೇಶಕ್ಕಾಗಿ ತ್ಯಾಗ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

Join Whatsapp