ಕೋವಿಡ್ ಸಂದರ್ಭ 150 ದೇಶಗಳಿಗೆ ವೈದ್ಯಕೀಯ ನೆರವು ನೀಡಿದ್ದೇವೆ ಎಂದು ಸುಳ್ಳು ಹೇಳಿದ್ದ ಮೋದಿ | RTI ಮಾಹಿತಿ

Prasthutha: October 30, 2020

ನವದೆಹಲಿ : ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ವೇದಿಕೆಯೊಂದರಲ್ಲಿ ಹೇಳಿದ್ದರು. ಆದರೆ, ಈ ಬಗ್ಗೆ ಹೆಚ್ಚಿನ ವಿವರ ಕೇಳಿದ್ದ ಆರ್ ಟಿಐ ಮಾಹಿತಿ ಪ್ರಕಾರ, ಕೇವಲ 81 ದೇಶಗಳಿಗೆ ಭಾರತ ನೆರವಾಗಿರುವುದಾಗಿ ಉತ್ತರ ಬಂದಿದೆ. ಆ ಮೂಲಕ ವಿಶ್ವಸಂಸ್ಥೆ ವೇದಿಕೆಯೊಂದರಲ್ಲಿ ಸುಳ್ಳು ಹೇಳುವ ಮೂಲಕ ಪ್ರಧಾನಿ ಮೋದಿಯವರು ದೇಶದ ಮಾನ ಕಳೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜು. 17ರಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಅಧಿವೇಶನದ ಉನ್ನತ ಮಟ್ಟದ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾಡಿದ್ದ ಭಾಷಣದಲ್ಲಿ ತಿಳಿಸಿದ್ದ ಮಾಹಿತಿಗೂ, ಈಗ ಸರಕಾರವೇ ನೀಡಿರುವ ಅಂಕಿಅಂಶಗಳಿಗೆ ವ್ಯತ್ಯಾಸವಿರುವುದು ಮುಜುಗರಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ ಜುಲೈ 17ರಂದು ಭಾಷಣ ಮಾಡಿ, 150 ದೇಶಗಳಿಗೆ ನೆರವು ನೀಡಿರುವ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಆಗಸ್ಟ್ ಮೊದಲ ವಾರದ ವರೆಗೂ ಭಾರತ 81 ದೇಶಗಳಿಗೆ 97.73 ಕೋಟಿ ರೂ. ನೆರವು ನೀಡಿದೆ ಎಂಬುದು ಸರಕಾರಿ ಅಂಕಿಅಂಶಗಳಿಂದಲೇ ತಿಳಿದುಬಂದಿದೆ.

ಭಾರತದಿಂದ ನೆರವು ಪಡೆದ ಉಳಿದ ದೇಶಗಳು ಯಾವುವು ಎಂಬುದು ತಿಳಿಯುತ್ತಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಎಂಬವರು ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ