ಅಮೆರಿಕ ಚುನಾವಣಾ ಫಲಿತಾಂಶ ವೇಳೆ ನಾಗರಿಕ ಅಶಾಂತಿ ಸೃಷ್ಟಿಯಾಗಬಹುದು : ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಆತಂಕ

Prasthutha|

ಸ್ಯಾನ್ ಫ್ರಾನ್ಸಿಸ್ಕೊ : ಅಮೆರಿಕ ಚುನಾವಣಾ ಫಲಿತಾಂಶದ ವೇಳೆ ಸಮಾಜದಲ್ಲಿ ಅಶಾಂತಿ ತಲೆದೋರುವ ಸಾಧ್ಯತೆಯಿದೆ ಎಂದು ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಎಚ್ಚರಿಕೆ ನೀಡಿದ್ದಾರೆ.

“ನಮ್ಮ ದೇಶ ಅತ್ಯಂತ ವಿಭಜನೆಯಾಗಿರುವುದಕ್ಕೆ ನಾನು ಆತಂಕಿತನಾಗಿದ್ದೇನೆ ಮತ್ತು ನಾಗರಿಕ ಅಶಾಂತಿ ತಲೆದೋರಬಹುದಾದ ಕಾರಣ, ಚುನಾವಣಾ ಫಲಿತಾಂಶ ಅಂತಿಮಗೊಳಿಸಲು ದಿನಗಳ ಅಥವಾ ವಾರಗಳು ಬೇಕಾಗಬಹುದು’’ ಎಂದು ಜುಕರ್ ಬರ್ಗ್ ಹೇಳಿದ್ದಾರೆ.

- Advertisement -

ಈಗಾಗಲೇ ಕ್ಯಾಪಿಟಲ್ ಹಿಲ್ ಅಧಿವೇಶನದ ವೇಳೆ ಜುಕರ್ ಬರ್ಗ್ ಅವರನ್ನು ಕರೆಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಫೇಸ್ ಬುಕ್ ಅಡೆತಡೆಯಾಗಿರುವ ಬಗ್ಗೆ ಪ್ರಶ್ನಿಸಲಾಗಿದೆ. ಚುನಾವಣಾ ಪ್ರಚಾರದಲ್ಲಿ ಫೇಸ್ ಬುಕ್ ಅಡ್ಡಿಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರತಿಪಕ್ಷಗಳು ಆಪಾದಿಸಿದ್ದವು. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಫೇಸ್ ಬುಕ್ ಉನ್ನತಾಧಿಕಾರಿಗಳು ತಿಳಿಸಿದ್ದರು. ನ.3ರಂದು ಅಮೆರಿಕ ಚುನಾವಣೆ ನಡೆಯಲಿದೆ.

- Advertisement -