ಮೋದಿ ದೊಡ್ಡಣ್ಣ, ರಾಜ್ಯಕ್ಕೆ ಗುಜರಾತ್ ಮಾದರಿ ಆಗತ್ಯ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ

Prasthutha|

ತೆಲಂಗಾಣ: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮಾರ್ಚ್ 4ರಂದು ಪ್ರಧಾನಿ ನರೇಂದ್ರ ಮೋದಿಯವರನ್ನು ದೊಡ್ಡಣ್ಣ ಎಂದು ಕರೆದಿದ್ದಾರೆ. ಗುಜರಾತ್ ಮಾದರಿಯನ್ನು ಅನುಸರಿಸಿದರೆ ಮಾತ್ರ ತೆಲಂಗಾಣ ಅಭಿವೃದ್ಧಿ ಹೊಂದುತ್ತದೆ ಎಂದೂ ಹೇಳಿದ್ದಾರೆ.

- Advertisement -

ಪ್ರಧಾನಿ ದೊಡ್ಡಣ್ಣನಿದ್ದಂತೆ ಮತ್ತು ಯಾವುದೇ ರಾಜ್ಯವು ಅವರ ಸಹಾಯ ಮತ್ತು ಬೆಂಬಲದಿಂದ ಅಭಿವೃದ್ಧಿ ಹೊಂದಬಹುದು. ತೆಲಂಗಾಣ ಅಭಿವೃದ್ಧಿ ಹೊಂದಬೇಕಾದರೆ ಅದು ಗುಜರಾತ್ ಮಾದರಿಯನ್ನ ಅನುಸರಿಸಬೇಕು ಎಂದು ತೆಲಂಗಾಣ ಸಿಎಂ ಹೇಳಿದರು.

ತಾನು ಇನ್ನು ಮುಂದೆ ಕೇಂದ್ರದ ವಿರುದ್ಧ ಹೋರಾಡುವುದಿಲ್ಲ ಮತ್ತು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ಮೋದಿಯವರ ದೃಷ್ಟಿಕೋನಕ್ಕೆ ಸೇರುತ್ತೇನೆ ಎಂದು ರೆಡ್ಡಿ ಇದೇ ಸಂದರ್ಭ ಹೇಳಿದರು.

- Advertisement -

ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಈ ಐದು ಮೆಟ್ರೋಪಾಲಿಟನ್ ನಗರಗಳು ಪ್ರಧಾನಿ ಮೋದಿಯವರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿನಲ್ಲಿ ಕೊಡುಗೆ ನೀಡಿವೆ” ಎಂದು ರೆಡ್ಡಿ ಹೇಳಿದರು.

ತೆಲಂಗಾಣ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ತೆಲಂಗಾಣದ ಅದಿಲಾಬಾದ್‌ನಲ್ಲಿ 30ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

Join Whatsapp