ಮೋದಿಯನ್ನು ಹೊಗಳಿದ ‘ನ್ಯೂಯಾರ್ಕ್ ಟೈಮ್ಸ್’ ನಕಲಿ ಚಿತ್ರ : ಸುಳ್ಳಿನಲ್ಲೂ ನಗೆಪಾಟಲಿಗೀಡಾದ ಮೋದಿ ಅಭಿಮಾನಿಗಳು !

Prasthutha|

► ಸೆಪ್ಟಂಬರ್ ತಿಂಗಳನ್ನೇ ತಪ್ಪಾಗಿ ಎಡಿಟ್ ಮಾಡಿ ಸಿಕ್ಕಿ ಬಿದ್ದರು !

- Advertisement -

ಪ್ರಧಾನಿ ಮೋದಿಯವರ ಅಮೆರಿಕಾ ಪ್ರವಾಸದ ಸಮಯದಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ “ಮೋದಿಯವರೇ ಜಗತ್ತಿನ ಕೊನೆಯ ಭರವಸೆ” ಎಂಬ ತಲೆ ಬರಹದ ವರದಿ ಪ್ರಕಟಿಸಿತ್ತು ಎಂದು ಅದರ ಸ್ಕ್ರೀನ್ ಶಾಟ್ ಒಂದನ್ನು ನರೇಂದ್ರ ಮೋದಿ ಅಭಿಮಾನಿಗಳು ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಸೆಪ್ಟಂಬರ್ 26ರ ಪತ್ರಿಕಾ ವರದಿ ಎಂದು ಬಿಂಬಿಸಲಾಗಿತ್ತು. ಇದನ್ನೇ ನಿಜವೆಂದು ನಂಬಿದ ಹಲವರು ಚಿತ್ರವನ್ನು ವೈರಲ್ ಮಾಡಿದ್ದರು. ಆದರೆ ‘ಇಂಟರ್ನ್ಯಾಶನಲ್ ಬಿಸಿನೆಸ್ ಟೈಮ್ಸ್’ ಇದರ ಸತ್ಯಾಸತ್ಯತೆಯನ್ನು ಹೊರ ಹಾಕಿದ್ದು, ಎಂದಿನಂತೆ ಮೋದಿ ಅಭಿಮಾನಿಗಳು ನಕಲಿ ಸುದ್ದಿಯ ಮೂಲಕ ಮತ್ತೊಮ್ಮೆ ಮುಖಭಂಗಕ್ಕೀಡಾಗಿದ್ದಾರೆ.  

ವಾಸ್ತವದಲ್ಲಿ ಸೆಪ್ಟಂಬರ್ 26ರ ‘ನ್ಯೂಯಾರ್ಕ್ ಟೈಮ್ಸ್’ ಮುಖಪುಟದಲ್ಲಿ ಬೇರೆಯದೇ ಸುದ್ದಿ ಇತ್ತು. ನರೇಂದ್ರ ಮೋದಿಯವರ ಅಧಿಕೃತ ವೆಬ್ ಸೈಟಿನ ಚಿತ್ರವೊಂದನ್ನು ತೆಗೆದು ಅದಕ್ಕೆ ‘ನ್ಯೂಯಾರ್ಕ್ ಟೈಮ್ಸ್’ ನ ಮುಖಪುಟವನ್ನು ನಕಲಿಯಾಗಿ ಅಚ್ಚೊತ್ತಿಸಿ ವೈರಲ್ ಮಾಡಲಾಗಿತ್ತು.  

- Advertisement -

ಸ್ವಾರಸ್ಯಕರ ವಿಷಯವೆಂದರೆ ಮೋದಿ ಅಭಿಮಾನಿಗಳು ನಕಲಿ ಚಿತ್ರ ತಯಾರಿಸುವಲ್ಲಿಯೂ ಎಡವಿದ್ದಾರೆ. ಸೆಪ್ಟಂಬರ್ ಎಂದು ಇಂಗ್ಲಿಷ್ ನಲ್ಲಿ ಬರೆಯುವಾಗ ಸೆಟ್ಪೆಂಬರ್ ಎಂದು ತಪ್ಪಾಗಿ ಮುದ್ರಿಸಿದ್ದಾರೆ. ಮಾತ್ರವಲ್ಲ ಮೋದಿಯ ಅಧಿಕೃತ ವೆಬ್ ಸೈಟಿನ ಚಿತ್ರವನ್ನು ಯಾರೋ ಈ ಹಿಂದೆ  “ಪ್ರಧಾನಿಗಳು ಈ ದೇಶದ ಉದ್ಧಾರಕ್ಕಾಗಿ  ಖಾಲಿ A4 ಶೀಟಿನ ಮೇಲೆ ಸಹಿ ಹಾಕುತ್ತಿದ್ದಾರೆ” ಎಂದು ಬರೆದು ಕಾಲೆಳೆದಿದ್ದರು. ಅದೇ ಚಿತ್ರವನ್ನು  ಮೋದಿ ಅಭಿಮಾನಿಗಳು ‘ನ್ಯೂಯಾರ್ಕ್ ಟೈಮ್ಸ್’ ನಕಲಿ ಚಿತ್ರಕ್ಕೆ ಬಳಸಿದ್ದಾರೆ. ಇದ್ಯಾವುದನ್ನೂ ಗಮನಿಸದ ಮೋದಿ ಅಭಿಮಾನಿಗಳು ಎಂದಿನಂತೆ ತಮಗೆ ಸಿಕ್ಕ ಸುಳ್ಳು ಸುದ್ದಿಯನ್ನು  ಜಾಲತಾಣಗಳಲ್ಲಿ ಹೆಮ್ಮೆಯಿಂದ ಹಂಚಿಕೊಂಡು ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ.



Join Whatsapp