ಭಾರತದ ನೈಜ ಸಮಸ್ಯೆಗಳನ್ನು ಬಿಟ್ಟು ಕೈತೊಳೆಯುವ ಸಲಹೆ ನೀಡಿದ ಮೋದಿ !

Prasthutha|


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ 7ನೇ ಭಾಷಣ ಇಂದು ಪ್ರಸಾರವಾಗಿದ್ದು, ಕೊರೋನಾ ಕುರಿತು ಜನರಿಗೆ ಎಚ್ಚರಿಕೆ ಹೇಳುವುದನ್ನು ಮುಂದುವರಿಸಿದ್ದಾರೆ. ಇತರ ಪ್ರಮುಖ ವಿಷಯಗಳಾದ ಜಿಡಿಪಿ ಕುಸಿತ, ಲಢಾಕ್ ನಲ್ಲಿ ಚೀನಾ ಆಕ್ರಮಣದ ಕುರಿತು ಯಾವುದೇ ಮಾತುಗಳನ್ನು ಆಡಿಲ್ಲ.

- Advertisement -

ಲಾಕ್ಡೌನ್ ಹೋಗಿದ್ದರೂ ಕೊರೋನಾ ಹೋಗಿಲ್ಲ. ಜನರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕೈಗಳನ್ನು ಆಗಾಗ್ಗೆ ಸೋಪು ಹಾಕಿ ತೊಳೆಯಬೇಕೆಂಬ ಪುಕ್ಕಟೆ ಸಲಹೆಗಳನ್ನು ನೀಡಿದ್ದಾರೆಯೇ ಹೊರತು ಇತರ ಸಮಸ್ಯೆಗಳ ಕುರಿತು ಮಾತನಾಡಿಲ್ಲ.

ಇಂದು ಸಂಜೆ ಆರು ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿರುವುದಾಗಿ ನರೇಂದ್ರ ಮೋದಿ ಪ್ರಕಟಿಸುವುದರೊಂದಿಗೆ, “ಪ್ರಿಯ ಪ್ರಧಾನಿಯವರೆ 6 ಗಂಟೆಯ ಭಾಷಣದಲ್ಲಿ ಚೀನಿಯರನ್ನು ನೀವು ಭಾರತೀಯ ಭೂ ಪ್ರದೇಶದಿಂದ ಹೊರಗಟ್ಟುವ ದಿನಾಂಕವನ್ನು ನೀಡಿರಿ” ಎಂದು ಕುಟುಕಿದ್ದರು.

- Advertisement -

ಇತ್ತಿಚೆಗಷ್ಟೆ ಐ.ಎಂ.ಎಫ್ ಬಿಡುಗಡೆಗೊಳಿಸಿದ ತಲಾ ಜಿಡಿಪಿ ನಿರ್ವಹಣೆಯ ಪಟ್ಟಿಯಲ್ಲಿ ಭಾರತವು ಮೈನಸ್ 10 ದರದೊಂದಿಗೆ ಬಾಂಗ್ಲಾ, ಚೀನಾ, ನೇಪಾಳ, ಪಾಕಿಸ್ತಾನ, ಇಂಡೊನೇಶ್ಯಾ, ಶ್ರೀಲಂಕಾ, ಅಫ್ಘಾನಿಸ್ಥಾನ, ಮಲೇಶ್ಯಾ ಮತ್ತು ಥಾಯ್ಲಾಂಡ್ ಗಿಂತ ಹಿಂದಿದೆ. ಕೊರೋನಾ ನಿರ್ವಹಣೆಯಲ್ಲೂ ಈ ದೇಶಗಳ ಪೈಕಿ ಭಾರತ ಕೊನೆಯ ಸ್ಥಾನವನ್ನು ಹೊಂದಿತ್ತು.



Join Whatsapp