ಟಿಆರ್‌ಪಿ ಹಗರಣ: ಲಕ್ನೋದಲ್ಲಿ ತನಿಖೆ ವಹಿಸಿಕೊಂಡ ಸಿಬಿಐ

Prasthutha|

ಉತ್ತರ ಪ್ರದೇಶ: ದೇಶದಲ್ಲಿ ಸದ್ಯ ಚರ್ಚೆಯಾಗುತ್ತಿರುವ ಟಿಆರ್‌ಪಿ(ಟೆಲಿವಿಶನ್ ರೇಟಿಂಗ್ ಪಾಯಿಂಟ್)  ಹಗರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಸರ್ಕಾರ ಶಿಫಾರಸ್ಸಿನ ಮೇರೆಗೆ ಲಕ್ನೋ ಪೊಲೀಸರಿಂದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.

ಟಿಆರ್‌ಪಿ ಹಗರಣದ ತನಿಖೆಗಾಗಿ ಯುಪಿಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ  ಸಿಬಿಐ ಮಂಗಳವಾರ ಲಖನೌದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಲಕ್ನೋ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡಿರುವ ಸಿಬಿಐ, ಉತ್ತರ ಪ್ರದೇಶ ಪೊಲೀಸರ ಉಲ್ಲೇಖದ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ  ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮಾಹಿತಿ ಬಂದಿದೆ.

- Advertisement -

ಮುಂಬೈ ಪೊಲೀಸರು ಮೊದಲು  ಈ ಟಿಆರ್‌ಪಿ ಹಗರಣವನ್ನು ಬೆಳಕಿಗೆ ತಂದಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಕನಿಷ್ಠ ಮೂರು ಚಾನೆಲ್‌ಗಳ ಮೇಲೆ ರೇಟಿಂಗ್ ರಿಗ್ಗಿಂಗ್ ಮಾಡಿದೆ ಎಂದು ಆರೋಪಿಸಿದ ಬಳಿಕ ದೇಶಾದ್ಯಂತ ಇದು ಚರ್ಚೆಯಾಗುತ್ತಿದೆ. ಈ ಮಧ್ಯೆ ರಿಪಬ್ಲಿಕ್ ಟಿವಿಯು ಮುಂಬೈ ಪೊಲೀಸ್ ಆಯುಕ್ತರ ಮೇಲೆ 200 ಕೋಟಿ ರೂ. ಮಾನ ನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

- Advertisement -