ರೂಪದರ್ಶಿ ಆತ್ಮಹತ್ಯೆ ಪ್ರಕರಣ: ಜಿಮ್ ತರಬೇತುದಾರನ ಬಂಧನ

Prasthutha|

ಬೆಂಗಳೂರು: ರೂಪದರ್ಶಿ ವಿದ್ಯಾಶ್ರೀ (25) ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರ ಅಕ್ಷಯ್ ನನ್ನು (27) ಪೊಲೀಸರು ಬಂಧಿಸಿದ್ದಾರೆ.

- Advertisement -


‘ಕೆಂಪಾಪುರದ ನಿವಾಸಿ ವಿದ್ಯಾಶ್ರೀ, ಜುಲೈ 21ರಂದು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮರಣ ಪತ್ರ ಸಿಕ್ಕಿದೆ. ಮದುವೆಯಾಗುವುದಾಗಿ ಹೇಳಿ ವಂಚಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಸ್ನೇಹಿತ ಅಕ್ಷಯ್ ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.


ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ವಿದ್ಯಾಶ್ರೀ ಖಾತೆ ತೆರೆದಿದ್ದರು. ಅವರ ಖಾತೆಗೆ ಆರೋಪಿ ಅಕ್ಷಯ್ 2021ರಲ್ಲಿ ಫ್ರೇಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ವಿದ್ಯಾಶ್ರೀ ಸ್ವೀಕರಿಸಿದ್ದರು. ‘ನಾನು ನಿಮ್ಮ ಅಭಿಮಾನಿ’ ಎಂಬುದಾಗಿ ಹೇಳಿಕೊಂಡು ಮಾತನಾಡಲಾರಂಭಿಸಿದ್ದ ಅಕ್ಷಯ್, ವಿದ್ಯಾಶ್ರೀ ಸ್ನೇಹ ಸಂಪಾದಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -


‘ವಿದ್ಯಾಶ್ರೀ ಹಾಗೂ ಅಕ್ಷಯ್, ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಹಲವು ಬಾರಿ ಭೇಟಿ ಸಹ ಆಗಿದ್ದರು. ಮದುವೆಯಾಗುವುದಾಗಿ ಹೇಳಿದ್ದ ಆರೋಪಿ, ವಿದ್ಯಾಶ್ರೀ ಕಡೆಯಿಂದ ₹ 1.76 ಲಕ್ಷ ಸಾಲ ಪಡೆದಿದ್ದ. ಜೊತೆಗೆ, ಲೈಂಗಿಕವಾಗಿ ಬಳಸಿಕೊಂಡಿದ್ದ’ ಎಂದು ಹೇಳಿವೆ.

Join Whatsapp