► ಮಂಗಳೂರು ಮನಪಾ ಕಚೇರಿಯಲ್ಲಿ ಮತದಾನಕ್ಕೆ ಅವಕಾಶ
ಮಂಗಳೂರು: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರಕ್ಕೆ ಚುನಾವಣೆ ಇಂದು ಆರಂಭವಾಗಿದೆ. ದ.ಕ,ಉಡುಪಿ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೇಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೇಸ್ ಎಸ್ ಡಿಪಿಐ ನ ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೇಸ್ ನ ಮಂಜುನಾಥ ಭಂಡಾರಿ ಹಾಗೂ ಎಸ್ ಡಿಪಿಐ ನ ಶಾಫಿ.ಕೆ ಕಣದಲ್ಲಿಇದ್ದಾರೆ.
ಒಟ್ಟು 389 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ದ.ಕ,ಉಡುಪಿ ಜಿಲ್ಲೆಯಲ್ಲಿ ಒಟ್ಟು 6,040 ಮತದಾರರು ಹೊಂದಿದ್ದಾರೆ.
ರಾಜ್ಯ ವಿಧಾನ ಪರಷತ್ ಚುನಾವಣೆಯ ಹಿನ್ನೆಲೆಯಲ್ಲಿ, ಮಂಗಳೂರು ಮನಪಾ ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆ ೮ ರಿಂದ ಸಂಜೆ ೪ ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮನಪಾ ಸದಸ್ಯರಾದ ಎಸಿ ವಿನಯ್ ರಾಜ್ ಮೊದಲ ಮತ ಚಲಾವಣೆ ನಡೆಸಿದ್ದು, ಒಟ್ಟು ಮನಪಾದಲ್ಲಿ ೬೦ ಸದಸ್ಯರಿಂದ ಮತದಾನ ನಡೆಯಲಿದೆ.