MLC ಚುನಾವಣೆ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಬಿಜೆಪಿಯ ಆಕ್ಷೇಪಣೆಗಳನ್ನು ತಿರಸ್ಕರಿಸಿದ ಚುನಾವಣಾಧಿಕಾರಿ

Prasthutha|

ಮೈಸೂರು: ಮೈಸೂರು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರದ ಬಗ್ಗೆ ಬಿಜೆಪಿಯ ಆಕ್ಷೇಪಣೆಗಳನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ.

- Advertisement -


ಮೈಸೂರು ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ತಿಮ್ಮಯ್ಯ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಕೆಲವು ಆಕ್ಷೇಪಣೆಗಳನ್ನು ಬಿ.ಜೆ.ಪಿಯ ಅಭ್ಯರ್ಥಿ ಸಲ್ಲಿಸಿದ್ದರು. ಆ ಆಕ್ಷೇಪಣೆಗಳ ವಿಚಾರಣೆ ಇಂದು ನಿಗದಿಯಾಗಿತ್ತು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಅಧಿಕಾರಿಗಳ ಮುಂದೆ ಹಾಜರಾಗಿ, ಬಿಜೆಪಿ ಪಕ್ಷ ಸಲ್ಲಿಸಿದ್ದ ಆಕ್ಷೇಪಣೆಗಳಿಗೆ ಉತ್ತರವನ್ನು ನೀಡಿ ವಾದವನ್ನು ಮಂಡಿಸಿದೆ. ನಮ್ಮ ವಾದವನ್ನು ಪುರಸ್ಕರಿಸಿ ಚುನಾವಣಾ ಅಧಿಕಾರಿಗಳು ಬಿಜೆಪಿಯ ಆಕ್ಷೇಪಣೆಗಳನ್ನು ತಿರಸ್ಕರಿಸಿದ್ದಾರೆ. ಡಾ.ತಿಮ್ಮಯ್ಯ ಅವರ ನಾಮಪತ್ರವನ್ನು ಅಂಗೀಕರಿಸಿದ್ದಾರೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ತಿಳಿಸಿದ್ದಾರೆ.


ಈ ಪ್ರಕರಣದಲ್ಲಿ ನನಗೆ ಸಹಾಯ ಮಾಡಿದಂತ ನನ್ನ ಸಹೋದ್ಯೋಗಿಗಳಾದ ಶತಭಿಷ್ ಶಿವಣ್ಣ, ಅಭಿಷೇಕ್ ಮತ್ತು ಕೆಪಿಸಿಸಿ ಕಾನೂನು ಘಟಕದ ಮೈಸೂರು ವಿಭಾಗದ ಎಲ್ಲಾ ಸ್ನೇಹಿತರಿಗೆ ಹಾಗೂ ಡಾ.ತಿಮಯ್ಯ ಅವರಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸಿದ ಪೊನ್ನಣ್ಣ ಈ ಚುನಾವಣೆಯಲ್ಲಿ ಡಾ.ತಿಮಯ್ಯನವರು ಗೆಲುವನ್ನು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

Join Whatsapp