ಕೋವಿಡ್ ಹಿನ್ನೆಲೆ: ಜನಗಣತಿ, NPR ಪ್ರಕ್ರಿಯೆ ಮುಂದೂಡುವ ಸಾಧ್ಯತೆ

Prasthutha|

ನವದೆಹಲಿ: ಹತ್ತು ವರ್ಷಕ್ಕೊಮ್ಮೆ ನಡೆಸುವ ಜನಗಣತಿ ಸಮೀಕ್ಷೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಮುಂದೂಡುವ ಸಾಧ್ಯತೆಯಿದೆ.

- Advertisement -

ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ ಇದಕ್ಕಾಗಿ ಮೀಸಲಿಟ್ಟ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಹಿಂದಿರುಗಿಸಲಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ಬಾರಿಯ ಜನಗಣತಿಯನ್ನು 2011 ರಲ್ಲಿ ನಡೆಸಲಾಗಿತ್ತು ಮತ್ತು 2021 ರಲ್ಲಿ ಮತ್ತೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಪ್ರಸಕ್ತ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಬೇಕಾಗಿದ್ದು, ಏಪ್ರಿಲ್ ನಿಂದ ಸೆಪ್ಟೆಂಬರ್ 2020 ರ ವರೆಗೆ ಮನೆ, ವಸತಿ ಗಣತಿ ಮತ್ತು ಫೆಬ್ರವರಿ 9 ರಿಂದ 28, 2021 ರ ಜನಸಂಖ್ಯೆಯ ಎಣಿಕೆ ನಡೆಸಲು ತೀರ್ಮಾನಿಸಲಾಗಿತ್ತು.

ಈ ಮಧ್ಯೆ ರಿಜಿಸ್ಟಾರ್ ಜನರಲ್ ಆಫ್ ಇಂಡಿಯಾ (RGI) ಅವರು ಸಮೀಕ್ಷೆಗಾಗಿ ತರಬೇತಿಯನ್ನು ನೀಡಲಾಗಿದೆ ಎಂದು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಸಾಂಕ್ರಾಮಿಕ ಕೋವಿಡ್ ಹಿನ್ನೆಲೆಯಲ್ಲಿ ಸ್ವಯಂ ಸೇವಕರು ಲಸಿಕಾ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp