ಬೆಡ್ ಬ್ಲಾಕಿಂಗ್ ದಂಧೆ ಹಿಂದೆ ನಮ್ಮವರದ್ದೇ ಷಡ್ಯಂತ್ರ | ಬಿಜೆಪಿ ಶಾಸಕ ಸತೀಶ್‍ ರೆಡ್ಡಿ

Prasthutha: June 22, 2021

ಬೆಂಗಳೂರು : ಇತ್ತೀಚ್ಚೆಗೆ ರಾಜ್ಯಾದ್ಯಂತ ವಿವಾದವೆಬ್ಬಿಸಿದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆಯ ವಿಚಾರವಾಗಿ ಬಿಜೆಪಿ ಹಿರಿಯರಿಗೆ ಲಿಖಿತವಾಗಿ ದೂರು ನೀಡಿದ್ದೇನೆ. ಈ ಬಗ್ಗೆ ಕೂಲಂಕಷವಾಗಿ ವಿಚಾರಿಸುವುದಾಗಿ ಭರವಸೆ ನೀಡಿದ್ದಾರೆಂದು ಶಾಸಕ ಸತೀಶ್‍ ರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು, ಬೆಡ್ ಬ್ಲಾಕಿಂಗ್ ಪ್ರಕರಣದ ಹಿಂದೆ ನಮ್ಮವರದ್ದೇ ಷಡ್ಯಂತ್ರ ಇದೆ ಎಂದು ಕೆಲವರು ಈಗಾಗಲೇ ದೂರಿದ್ದಾರೆ. 4,500 ಬೆಡ್ ಹಗರಣ ಬಯಲಿಗೆ ಎಳೆದೆ. ಆದರೆ, ಈ ದಂಧೆಯನ್ನು ಬಯಲಿಗೆಳೆದ ನನ್ನ ಮೇಲೆಯೇ ಆರೋಪ ಮಾಡಿದ್ದು ನನಗೆ ಬೇಸರ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಡ್ ಬ್ಲಾಕ್ ದಂಧೆಯಲ್ಲಿ ಸಂಬಂಧ ಇಲ್ಲದೇ ಇರದ ವ್ಯಕ್ತಿಗಳನ್ನು ನನ್ನ ಹೆಸರ ಜತೆ ಜೋಡಿಸಿದ್ದಾರೆ. ನಾವು 4,500 ಬೆಡ್ ವಿಚಾರ ಎತ್ತಿದ್ದು, ಸರಕಾರದ ಕೆಲವರಿಗೆ ಮುಜುಗರ ಆಗಿದೆ. ಕೆಲ ಅಧಿಕಾರಿಗಳು ಅವ್ಯವಹಾರ ಮಾಡಿ ಕೋಟ್ಯಂತರ ದುಡ್ಡು ಮಾಡಿದ್ದಾರೆ. ಅಂತವರ ವಿರುದ್ಧ ಕ್ರಮ ಆಗಬೇಕು. ನನ್ನ ಅಭಿವೃದ್ದಿ ಸಹಿಸಲು ಸಾಧ್ಯವಾಗದೇ ಈ ರೀತಿ ಮಾಡಿದ್ದಾರೆ. ಅವರಿಗೆ ಭಗವಂತ ಒಳ್ಳೇದು ಮಾಡಲಿ ಎಂದು ಅವರು ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ