ತಮಿಳುನಾಡಿಗೆ ಒಂದೇ ಒಂದು ಕ್ಯೂಸೆಕ್ ನೀರನ್ನೂ ಬಿಡಬಾರದು: ಕಾಂಗ್ರೆಸ್ ಶಾಸಕ ರವಿಕುಮಾರ್ ಆಗ್ರಹ

Prasthutha|

►‘ಒಂದು ವೇಳೆ ನೀರು ಬಿಟ್ಟರೆ ಮುಂದೆ ನನ್ನ ನಿಲುವು ತಿಳಿಸುತ್ತೇನೆ’

- Advertisement -

ಮಂಡ್ಯ: ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​​ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ಈ ಕುರಿತು ಹೇಳಿಕೆ ನೀಡಿದ ಮಂಡ್ಯ ಕಾಂಗ್ರೆಸ್ ಶಾಸಕ ಪಿ.ರವಿಕುಮಾರ್, ತಮಿಳುನಾಡಿಗೆ ಒಂದೇ ಒಂದು ಕ್ಯೂಸೆಕ್ ನೀರನ್ನು ಬಿಡದಂತೆ ಆಗ್ರಹಿಸಿದ್ದಾರೆ. ಅಲ್ಲದೆ, ನೀರು ಬಿಟ್ಟರೆ ಮುಂದೆ ನನ್ನ ನಿಲುವು ತಿಳಿಸುತ್ತೇನೆ ಎಂದಿದ್ದಾರೆ.

ತಮಿಳುನಾಡಿಗೆ ನಿತ್ಯ 5,000 ಕ್ಯೂಸೆಕ್​ ನೀರು ಬಿಡುವಂತೆ CWMA ಆದೇಶದ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಪಿ.ರವಿಕುಮಾರ್, ತಮಿಳುನಾಡಿಗೆ ಒಂದೇ ಒಂದು ಕ್ಯೂಸೆಕ್ ನೀರನ್ನೂ ಬಿಡಬಾರದು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ಅದೇನಾಗುತ್ತೊ ನೋಡಣ ಎಂದರು.

- Advertisement -

ಮೈಸೂರಿನಲ್ಲಿ ಸಿಎಂ, ಡಿಸಿಎಂ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿದ ಪಿ.ರವಿಕುಮಾರ್, ನಾನು ಯಾವಾಗಲೂ ಕ್ಷೇತ್ರದ ಜನ ಪರ ಇರುತ್ತೇನೆ. ಒಂದೊಮ್ಮೆ ಕೆಆರ್​ಎಸ್​​ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟರೆ ಮುಂದೆ ನನ್ನ ನಿಲುವು ತಿಳಿಸುತ್ತೇನೆ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Join Whatsapp