ಡಿಪೋ ವ್ಯವಸ್ಥಾಪಕಿಯಿಂದ ಕಿರುಕುಳ ಆರೋಪ: ವಿಷ ಕುಡಿದು KSRTC ನೌಕರ ಆತ್ಮಹತ್ಯೆಗೆ ಯತ್ನ

Prasthutha|

ಕೊಡಗು: ವಿಷ ಕುಡಿದು KSRTC ನೌಕರ ಅಭಿಷೇಕ್ ಎಂಬಾತ​ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಕೆಎಸ್​ಆರ್​ಟಿಸಿ ಡಿಪೋದಲ್ಲಿ‌ ನಡೆದಿದೆ.

- Advertisement -

ಅಸ್ವಸ್ಥಗೊಂಡ ನೌಕರ ಅಭಿಷೇಕ್​​ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಡಿಪೋ ವ್ಯವಸ್ಥಾಪಕಿ ಗೀತಾ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತು ಮಡಿಕೇರಿ ಟೌನ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.​