ಪ್ರವಾಹಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದ ಮಹಿಳಾ ಇನ್ಸ್ಪೆಕ್ಟರ್ ಗೆ ಸಿಎಂ ಎಂ.ಕೆ ಸ್ಟಾಲಿನ್ ಶಹಬ್ಬಾಸ್ ಗಿರಿ !

Prasthutha|

ಚೆನ್ನೈ: ವಿಪರೀತ ಮಳೆಗೆ ವ್ಯಕ್ತಿಯೋರ್ವ ಪ್ರಜ್ಞಾಹೀನವಾಗಿ ಬಿದ್ದದ್ದನ್ನು ಕಂಡಿದ್ದ ಮಹಿಳಾ ಇನ್ ಸ್ಪೆಕ್ಟರ್ ಹೆಗಲ ಮೇಲೆ ಹೊತ್ತು ವ್ಯಾಪಕ ಪ್ರಶಂಸೆಗೀಡಾಗಿದ್ದರು. ಮಹಿಳಾ ಇನ್ ಸ್ಪೆಕ್ಟರ್ ರಾಜೇಶ್ವರಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ.

- Advertisement -


ಚೆನ್ನೈನಲ್ಲಿ ಭಾರೀ ಮಳೆಗೆ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ವರಿಗೆ ನೆಟ್ಟಿಗರು ಬೇಷ್ ಅಂದಿದ್ದಾರೆ. ಅಲ್ಲದೇ ರಾಜೇಶ್ವರಿ ಅವರನ್ನು ಅಭಿನಂದಿಸಿ IAS ಅಧಿಕಾರಿಗಳು ಸೇರಿದಂತೆ ಹಲವರು ವಿಡಿಯೋ ಶೇರ್ ಮಾಡಿದ್ದರು.


ತಮಿಳುನಾಡಿನ ಉತ್ತರದ ಜಿಲ್ಲೆಗಳಾದ ಚೆನ್ನೈ, ಕಾಂಚೀಪುರಂ, ಕಡಲೂರು, ವಿಲ್ಲುಪುರಂ, ಚೆಂಗಲ್ ಪೇಟ್, ತಿರುವಳ್ಳೂರು, ರಾಣಿ ಪೆಟ್ಟಾ, ವೆಲ್ಲೂರು, ತಿರುಪತ್ತೂರು, ನಾಗಪಟ್ಟಣಂ, ಮೈಲಾಡುತುರೈ, ಕಲ್ಲ ಕುಚ್ಚಿ, ತಿರುವಣ್ಣಾಮಲೈ ಮತ್ತು ಸೇಲಂನಲ್ಲಿ ಅತಿ ಹೆಚ್ಚು ಮಳೆಯಾಗಿದೆ.

Join Whatsapp