ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್ ವಿರುದ್ಧ ಅತ್ಯಾಚಾರ ಆರೋಪ !

Prasthutha|

ಮುಂಬೈ: ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಹಲವು ಗಣ್ಯರ ವಿರುದ್ಧ ಗ್ಯಾಂಗ್ ಸ್ಟರ್ ದಾವೂದ್ ಇಬ್ರಾಹಿಂ ನ ಸಹಾಯಕ ರಿಯಾಝ್ ಭಾಟಿಯ ಪತ್ನಿ ಅತ್ಯಾಚಾರ ಆರೋಪ ಮಾಡಿದ್ದಾರೆ.
ತಮ್ಮ ಉದ್ಯಮ ಪಾಲುದಾರರು ಹಾಗೂ ಇತರ ಗಣ್ಯ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಲು ತನ್ನ ಪತಿ ತನ್ನನ್ನು ಒತ್ತಾಯಿಸಿದ್ದರು ಎಂದು ರಿಯಾಝ್ ಭಾಟಿಯ ಪತ್ನಿ ರೆಹನುಮಾ ಭಾಟಿ ಮುಂಬೈನ ಸಾಂತಾಕ್ರೂಜ್ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

- Advertisement -


ರೆಹನುಮಾ 24 ಸೆಪ್ಟೆಂಬರ್ 2021 ರಂದು ದೂರನ್ನು ಪೊಲೀಸರಿಗೆ ಸಲ್ಲಿಸಿದ್ದಾಳೆ. ಪಟೇಲ್, ಶುಕ್ಲಾ ಮತ್ತು ಕೊಠಾರಿ ಅವರ ಯಾವುದೇ ವಿಳಾಸಗಳನ್ನು ನೀಡಿಲ್ಲ ಅಥವಾ ಘಟನೆಗಳು ನಡೆದ ನಿರ್ದಿಷ್ಟ ದಿನಾಂಕಗಳು ಅಥವಾ ಸ್ಥಳಗಳನ್ನು ಉಲ್ಲೇಖಿಸಿಲ್ಲ ಎಂದು ತಿಳಿದು ಬಂದಿದೆ.


“ನಾನು ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಅದು ಸಾಧ್ಯವಾಗಿಲ್ಲ. ನಾನು ವಿವಿಧ ಹಂತದ ಪೊಲೀಸ್ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ರೆಹನುಮಾ ಆರೋಪಿಸಿದ್ದಾರೆ.

Join Whatsapp