ಅಮಲು ಪದಾರ್ಥಗಳ ವಿರುದ್ಧ ಜಾಗೃತಿ ಅಭಿಯಾನಕ್ಕೆ ಮಿತ್ತಬೈಲ್ ಜಮಾಅತ್ ನಿಂದ ಚಾಲನೆ

Prasthutha|

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲ ನಂತರ ಅತ್ಯಂತ ದೊಡ್ಡ ಜಮಾಅತ್ ಆಗಿರುವ ಬಂಟ್ವಾಳ ತಾಲೂಕಿನ ಮಿತ್ತಬೈಲ್ ಜಮಾಅತ್ ಅಮಲು ಪದಾರ್ಥಗಳ ವಿರುದ್ಧ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.

- Advertisement -

ಮಿತ್ತಬೈಲ್ ಜಮಾತ್ ನಲ್ಲಿ ಮುದರಿಸ್ ಉಮರ್ ಫಾರೂಕ್ ಫೈಝಿ ಚಾಲನೆ ನೀಡಿದರು. ಜಮಾತ್ ಅಧ್ಯಕ್ಷರಾಗಿರುವ ಹಾಜಿ ಮುಹಮ್ಮದ್ ಸಾಗರ್, ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್, ನುಸ್ರತ್ ಮಿಲದುನ್ನೆಬಿ ಸಂಘದ ಅಧ್ಯಕ್ಷರಾದ ಹನೀಫ್, ಜಮಾತ್ ಸದಸ್ಯರು ಮತ್ತು ನಾಗರಿಗರು ಪಾಲ್ಗೊಂಡಿದ್ದರು.

ಅದೇ ರೀತಿ ಮಿತ್ತಬೈಲ್ ಜಮಾತ್ ಗೆ ಒಳಪಟ್ಟ ತಾಳಿಪಡ್ಪು ಮಸೀದಿಯಲ್ಲಿ ಇರ್ಷಾದ್ ಫೈಝಿ ಚಾಲನೆ ನೀಡಿದರು.

- Advertisement -

  ಕಳೆದ ಒಂದು ತಿಂಗಳ ಹಿಂದೆ ಮಿತ್ತಬೈಲ್ ಜಮಾಅತ್ ಗೆ ಒಳಪಟ್ಟ ಶಾಂತಿಅಂಗಡಿ ಯುವಕಯೊಬ್ಬ ಅಮಲು ಪದಾರ್ಥಗಳ ವಿಷಯದಲ್ಲಿ ನಡೆದ ಸಣ್ಣ ಗಲಾಟೆಯಲ್ಲಿ ಮೃತಪಟ್ಟಿದ್ದರು. ಅದೇ ರೀತಿ 2 ದಿವಸ ಮೊದಲು ಮತ್ತಿಬ್ಬರು ಗಾಂಜಾ ವ್ಯಸನಿಗಳ ಹಾವಳಿಗೆ ಆಸ್ಪತ್ರೆ ಸೇರುವಂತಾಗಿತ್ತು. ಇದೀಗ ಜಮಾಅತ್ ನ ಈ ಅಭಿಯಾನದಲ್ಲಿ ಮಾದಕ ದ್ರವ್ಯ ವ್ಯಸನಿಗಳ ಜೊತೆ ಸಮಾಲೋಚನೆ, ಅದೇ ರೀತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮಾದಕ ವಸ್ತುಮುಕ್ತ ಜಮಾಅತ್ ಆಗಿ ಮಾಡಲು ಪಣತೊಟ್ಟಿದೆ.

Join Whatsapp