ಮಂಗಳೂರು: ಹಿಂದೂ ಯುವತಿಯ ಜೊತೆ ಇದ್ದನೆಂದು ಆರೋಪಿಸಿ ವ್ಯಕ್ತಿಯನ್ನು ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

Prasthutha|

ಮಂಗಳೂರು: ಹಿಂದೂ ಯುವತಿಯ ಜೊತೆ ಇದ್ದನೆಂದು ಆರೋಪಿಸಿ ವ್ಯಕ್ತಿಯೋರ್ವನಿಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ ಪೊಲೀಸರಗೊಪ್ಪಿಸಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ತೋಕೂರು ಬಳಿಯ ಬಾಡಿಗೆ ಮನೆ ನಿವಾಸಿ ಸಮೀರ್ ಥಳಿತಕ್ಕೊಳಗಾಗಿ ಬಂಧನವಾದ ವ್ಯಕ್ತಿ ಎಂದು ತಿಳಿದು ಬಂದಿದೆ.


ಸಮೀರ್ ಈಗಾಗಲೇ ವಿವಾಹವಾಗಿದ್ದಾನೆ. ಆದರೆ ಹಿಂದೂ ಯುವತಿ ಸವಿತಾ ಎಂಬಾಕೆಯ ಜೊತೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾನೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -


ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Join Whatsapp