ಶಾಸಕ ಮಾಡಾಳ್ ನಾಪತ್ತೆ: ನೋಟೀಸ್ ಗೆ ಸಿದ್ಧತೆ

Prasthutha|

ಬೆಂಗಳೂರು: 40 ಲಕ್ಷ ಲಂಚ ಸ್ವೀರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಪುತ್ರ ಜಲಮಂಡಳಿ‌ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್​ ಮಡಾಳ್ ಬಂಧನದ ಬೆನ್ನಲ್ಲೇ ಶಾಸಕ‌ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪತ್ತೆಗೆ ಲೋಕಾಯುಕ್ತ ಅಧಿಕಾರಿಗಳು ತೀವ್ರ ಶೋಧ ಕೈಗೊಂಡಿದ್ದಾರೆ.
ಬರೋಬರಿ 40 ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ ಕೆಡವಿ ಬಂಧಿಸಿದ್ದ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್​​ ಗೆ ಕೈಗೆ ಕೋಳ ತೊಡಿಸಿದ ಲೋಕಾಯುಕ್ತ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
ಪ್ರಕರಣದ ಮೊದಲ ಆರೋಪಿಯಾಗಿರುವ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಪರಾರಿಯಾಗಿದ್ದು,ಕಳೆದ ನಾಲ್ಕು
ದಿನದಿಂದ ಶಾಸಕ ಫೋನ್ ಸ್ವಿಚ್​ ಅಫ್ ಮಾಡಿಕೊಂಡಿದ್ದಾರೆ. ಮನೆಯವರಿಗೂ ಯಾವುದೇ ಮಾಹಿತಿ ನೀಡದೆ ಶಾಸಕರು ರಹಸ್ಯ ಜಾಗ ಸೇರಿಕೊಂಡಿದ್ದಾರೆ.
ಪ್ರಕರಣದ ಮೊದಲ ಆರೋಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗಾಗಿ ಲೋಕಾಯುಕ್ತ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ.
ಯಾರಿಗೂ ಗೊತ್ತಾಗದ ರಹಸ್ಯಜಾಗ ಸೇರಿಕೊಂಡಿರುವ ಮಾಡಾಳು ವಿರೂಪಾಕ್ಷಪ್ಪಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಲು ಮುಂದಾಗಿದ್ದಾರೆ.
ನೋಟಿಸ್ ಗೆ ಸಿದ್ಧತೆ:
ಪುತ್ರನ ಲಂಚಾವತಾರ ಪ್ರಕರಣ ಸಂಬಂಧ ಚನ್ನಗಿರಿ ಶಾಸಕರ ಮನೆಗೆ ನೋಟಿಸ್ ಕಳಿಸಲು ಸಿದ್ಧತೆ ಮಾಡಿಕೊಂಡಿದ್ದು, ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.
ಆದರೆ ಅದಕ್ಕೂ ಮುನ್ನವೇ ಶಾಸಕರ ಪುತ್ರ ಮಲ್ಲಿಕಾರ್ಜುನ್​ಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ. ಇದರ ನಡುವೆ, ಶಾಸಕರ ಕಿರಿಯ ಪುತ್ರ ಪ್ರಶಾಂತ್​ನಿಂದ​ ಹಣ ವರ್ಗಾವಣೆಯಾದ ಆರೋಪ ಕೇಳಿ ಬಂದಿದೆ.
ಲೋಕಾಯುಕ್ತ ದಾಳಿ ನಡೆದ ದಿನವೇ ಏಕಾಏಕಿ ಹಣ ವರ್ಗಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.ಎರಡು ಕಂಪನಿಗೆ ಬರೋಬ್ಬರಿ 94 ಲಕ್ಷ ಹಣ ವರ್ಗಾವಣೆ ಆಗಿದ್ದು,ಅದು ಸಿದ್ದಲಿಂಗೇಶ್ವರ, ಸಣ್ಣ ಗೌಡರ್ ಬ್ರದರ್ಸ್ ಕಂಪನಿಗೆ ವರ್ಗಾವಣೆಯಾಗಿದೆ. ಗಮನಿಸಬೇಕಾದ ಅಂಶವೆಂದರೆ, ಇದು ಮಲ್ಲಿಕಾರ್ಜುನ್ ಮಾಡಾಳು ಪಾಲುದಾರಿಕೆಯ ಕಂಪನಿಗಳು ಎಂದು ಹೇಳಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್​ ಮಾಡಾಳುಗೆ ಲೋಕಾ ನೋಟಿಸ್ ನೀಡಿದೆ. ನಾಳೆ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಸೂಚಿಸಿದೆ.
ಆಕ್ಷೇಪ ಸಲ್ಲಿಕೆ ಸಾಧ್ಯತೆ:
ಲೋಕಾಯುಕ್ತ ಅಧಿಕಾರಿಗಳ ಕಣ್ಣು ತಪ್ಪಿಸಿ ಓಡಾಡಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ, ನಿರೀಕ್ಷಣಾ ಜಾಮೀನು ಸಲ್ಲಿಸೋಕು ಹರಸಾಹಸ ಪಡುತ್ತಿದ್ದಾರೆ. ಆದರೆ ಅದಕ್ಕೂ ಮೊದಲೇ ಲೋಕಾ ಅಧಿಕಾರಿಗಳು ಕಟ್ಟೆಚ್ಚರ​ವಹಿಸಿದ್ದಾರೆ. ಶಾಸಕರಿಗೆ ಜಾಮೀನು ನೀಡದಂತೆ ಆಕ್ಷೇಪ ಸಲ್ಲಿಸಲು ಅಧಿಕಾರಿಗಳು ತೆರೆಮರೆ ಸಿದ್ಧತೆ ಮಾಡಿಕೊಂಡು ಕಾನೂನು ವಿಭಾಗದಿಂದ ಸೂಕ್ತ ದಾಖಲೆಗಳ ಸಂಗ್ರಹ ಮತ್ತು ಮಾಡಾಳು ಪಾತ್ರದ ಬಗ್ಗೆ ಸೂಕ್ತ ಅಂಶಗಳನ್ನು ಕಲೆ ಹಾಕುತ್ತಿದ್ದಾರೆ.
ಕೋಟಿ ಕೋಟಿ ಹಣ ಸಂಪಾದಿಸಿದ್ದ ಆರೋಪಿಗಳು, ಚಾಪೆ ಕೆಳಗೆ ನುಸುಳಿದರೆ, ಲೋಕಾಯುಕ್ತ ಅಧಿಕಾರಿಗಳು, ರಂಗೋಲಿ ಕೆಳಗೆ ಹೊಕ್ಕು ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಅವರಿಗೆ ಸಂಬಂಧಿಸಿದ ಆಸ್ತಿಗಳ ಮಾಹಿತಿ ಕೂಡ ಕಲೆ ಹಾಕುತ್ತಿದ್ದಾರೆ

Join Whatsapp