ನಾಪತ್ತೆಯಾಗಿದ್ದ ಬಾಲಕಿಯ ಶವ ಪತ್ತೆ: ಕೊಲೆ ಮಾಡಿ ಚೀಲದಲ್ಲಿ ಹಾಕಿದ ಕಿರಾತಕರು

Prasthutha|

ಕೊಪ್ಪಳ: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿರೋ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ನಡೆದಿದೆ. ಅನುಶ್ರೀ ಮಡಿವಾಳರ್ ಮೃತ ಬಾಲಕಿ.

- Advertisement -

ಮನೆ ಹತ್ತಿರದ ಪಾಳು ಮನೆಯಲ್ಲಿ ಶವ ಪತ್ತೆ

ಬಾಲಕಿ ಅನುಶ್ರೀ ಏಪ್ರಿಲ್ 19ರಂದು ಮಧ್ಯಾಹ್ನ ಮನೆಯಿಂದ ಆಟ ಆಡಲು ಹೋಗಿದ್ದವಳು ತಿರುಗಿ ಮನೆಗೆ ಬಾರದೇ ನಾಪತ್ತೆಯಾಗಿದ್ದಳು. ರವಿವಾರ ಅನುಶ್ರೀ ಶವ ಮನೆಯ ಹತ್ತಿರದ ಪಾಳು ಮನೆಯಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಕೊಲೆ ಮಾಡಿ ಬಳಿಕ ಚೀಲದಲ್ಲಿ ಶವವನ್ನು ಹಾಕಿದ್ದಾರೆ ಎಂದು ಅನುಮಾನಿಸಲಾಗಿದೆ.

Join Whatsapp