ಬೆಂಗಳೂರು: ಕಾರಿಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ

Prasthutha|

ಬೆಂಗಳೂರು: ರವಿವಾರ ರಾಜ್ಯಕ್ಕೆ ಕರಾಳ ದಿನವಾಗಿದ್ದು, ಸರಣಿ ದುರಂತಗಳು ಸಂಭವಿಸಿವೆ. ಮಾದನಾಯಕನಹಳ್ಳಿ ಬಳಿ ಓಮ್ನಿ ಕಾರು ಅಪಘಾತವಾಗಿ ಕಾಣಿಸಿಕೊಂಡ ಬೆಂಕಿಯಲ್ಲಿ ಬಾಲಕಿಯೊಬ್ಬಳು ಸಜೀವ ದಹನವಾದ ದಾರುಣ ಘಟನೆ ನಡೆದಿದೆ.

- Advertisement -

ಅಪಘಾತಕ್ಕೀಡಾದ ಬಳಿಕ ಓಮ್ನಿ ಕಾರು ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲಿದ್ದ ಬಾಲಕಿ ರಕ್ಷಣೆಗೆ ಮೊರೆಯಿಡುತ್ತಾ ಸಜೀವ ದಹನವಾಗಿದ್ದಾಳೆ.

14 ವರ್ಷದ ದಿವ್ಯಾ ಮೃತ ಬಾಲಕಿ. ಒಟ್ಟು 8 ಜನ ಕಾರಿನಲ್ಲಿದ್ದು, ಅಬ್ಬಿಗೆರೆಯಿಂದ ದಾಸನಪುರಕ್ಕೆ ವಾಪಾಸ್ ಆಗುತ್ತಿದ್ರು. ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.

- Advertisement -

ಘಟನೆಯಲ್ಲಿ ಸುನಿತಾ (20), ಮಂಜುಳ (65), ಮಯಾಂಕ್ (16) ಮತ್ತು ನಮನ್ (17) ಎಂಬುವರು ಗಾಯಗೊಂಡಿದ್ದಾರೆ.

Join Whatsapp