July 20, 2021

ಭಾರತ ಮೂಲದ ವೈದೇಹಿ ಡೋಂಗ್ರೆಗೆ ಮಿಸ್ ಇಂಡಿಯಾ ಯು ಎಸ್ ಎ ಕಿರೀಟ

ವಾಷಿಂಗ್ಟನ್ : 25 ವರ್ಷದ ವೈದೇಹಿ ಡೋಂಗ್ರೆ ಅವರು ಮಿಸ್ ಇಂಡಿಯಾ ಯು ಎಸ್ ಎ -2021 ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ವಾರಾಂತ್ಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಜಾರ್ಜಿಯಾದ ಆರ್ಶಿ ಲಾಲಾನಿ ಅವರು ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ವೈದೇಹಿ ಅವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಪ್ರಸ್ತುತ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರಾಗಿ ಪ್ರಮುಖ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ನಾನು ಸಮುದಾಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರಲು ಮತ್ತು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಾಕ್ಷರತೆಯತ್ತ ಗಮನಹರಿಸಲು ಇಚ್ಛಿಸುತ್ತೇನೆ ಎಂದು ವೈದೇಹಿ ಅವರು ಹೇಳಿದ್ದಾರೆ.

ವೈದೇಹಿ ಅವರು ತಮ್ಮ ಕಥಕ್ ನೃತ್ಯ ಪ್ರದರ್ಶನಕ್ಕೆ “ಮಿಸ್ ಟ್ಯಾಲೆಂಟೆಡ್” ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಆರ್ಶಿ ಲಾಲಾನಿ ಅವರನ್ನು ಈ ಸ್ಪರ್ಧೆಯ ಪ್ರಥಮ ರನ್ನರ್ ಅಪ್ ಆಗಿ ಆಯ್ಕೆ ಮಾಡಲಾಗಿದ್ದು , ಅವರು ಬೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ಆದ್ದರಿಂದ ಉತ್ತರ ಕ್ಯಾರೊಲಿನಾದ ಮೀರಾ ಕಸಾರಿ ಅವರು ದ್ವಿತೀಯ ರನ್ನರ್ ಅಪ್ ಆಗಿದ್ದಾರೆ . ಮಿಸ್ ಇಂಡಿಯಾ ಯು ಎಸ್ ಎ, ಮಿಷನ್ ಇಂಡಿಯಾ ಯು ಎಸ್ ಎ ಮತ್ತು ಮಿಸ್ ಟೀನ್ ಇಂಡಿಯಾ ಯು ಎಸ್ ಎ ಸೌಂದರ್ಯ ಸ್ಪರ್ಧೆಗಳಲ್ಲಿ ಅಮೆರಿಕದ 30 ರಾಜ್ಯಗಳಿಂದ 61 ಸ್ಪರ್ಧಿಗಳು ಭಾಗವಹಿಸಿದ್ದರು.

1997 ಮಿಸ್ ವರ್ಲ್ಡ್ ಡಯಾನಾ ಹೇಡನ್ ಈ ಸ್ಪರ್ಧೆಯ ಮುಖ್ಯ ಅತಿಥಿ ಮತ್ತು ಮುಖ್ಯ ತೀರ್ಪುಗಾರರಾಗಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!