ಮುಸ್ಲಿಮರ ಜನಸಂಖ್ಯೆ ನಿಯಂತ್ರಣಕ್ಕೆ 1,000 ಮಂದಿಯ “ಯುವ ಪಡೆ”!

Prasthutha|

ಗುವಾಹಟಿ: ರಾಜ್ಯದ ಮುಸ್ಲಿಮ್ ಪ್ರಾಬಲ್ಯದ ಪ್ರದೇಶಗಳಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಿ ಗರ್ಭನಿರೋಧಕಗಳನ್ನು ವಿತರಿಸಲು 1,000 ಮಂದಿ ಯುವಕರ ಸೇನೆಯನ್ನು ಅಸ್ಸಾಂ ಸರ್ಕಾರ  ಕಳುಹಿಸಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

- Advertisement -

ರಾಜ್ಯದ ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ಜನಸಂಖ್ಯಾ ಸ್ಫೋಟದ ಬಗ್ಗೆ ವಿಧಾನಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ ಅವರು, ಅಸ್ಸಾಂನಲ್ಲಿ ಹಿಂದೂಗಳ ಜನಸಂಖ್ಯೆಯ ಬೆಳವಣಿಗೆಯ ಪ್ರಮಾಣ 2001 ರಿಂದ 2011 ರವರೆಗೆ ಶೇಕಡಾ 10 ರಷ್ಟಿದ್ದರೆ, ಮುಸ್ಲಿಮರಲ್ಲಿ ಶೇಕಡಾ 29 ರಷ್ಟಿದೆ. ಕಡಿಮೆ ಜನಸಂಖ್ಯೆಯಿಂದಾಗಿ, ಅಸ್ಸಾಂನಲ್ಲಿ ಹಿಂದೂಗಳ ಜೀವನಶೈಲಿ ಉತ್ತಮವಾಗಿದ್ದು, ವಿಶಾಲವಾದ ಮನೆಗಳು, ವಾಹನಗಳು ಮತ್ತು ಅವರ ಮಕ್ಕಳು ವೈದ್ಯರು, ಎಂಜಿನಿಯರ್‌ಗಳಾಗುತ್ತಿದ್ದಾರೆ. ಆದ್ದರಿಂದ ಮುಸ್ಲಿಮ್ ಪ್ರಾಬಲ್ಯದ ಪ್ರದೇಶಗಳಲ್ಲಿ ಸುಮಾರು 1,000 ಯುವಕರು ಜನಸಂಖ್ಯೆ ನಿಯಂತ್ರಣ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಗರ್ಭನಿರೋಧಕಗಳನ್ನು ಪೂರೈಸಲಿದ್ದಾರೆ ಎಂದು ಹೇಳಿದ್ದಾರೆ.

Join Whatsapp