ಅಲ್ಪಸಂಖ್ಯಾತರು ಸಹ ದುರ್ಬಲ ವರ್ಗದವರು, ಈ ವರ್ಗಕ್ಕೆ ವಿಶೇಷ ಕಲ್ಯಾಣ ಯೋಜನೆ ಅಗತ್ಯ: ಅಲ್ಪಸಂಖ್ಯಾತ ಆಯೋಗ

Prasthutha|

ಹೊಸದಿಲ್ಲಿ, ಆ.3: ಭಾರತದಲ್ಲಿ ಬಹುಸಂಖ್ಯಾತರ ಪ್ರಾಬಲ್ಯ ಹೆಚ್ಚಿರುವ ಕಾರಣ ಅಲ್ಪಸಂಖ್ಯಾತರನ್ನು ದುರ್ಬಲ ವರ್ಗವಾಗಿ ಪರಿಗಣಿಸಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಪಾದಿಸಿದೆ.

- Advertisement -

ಸಂವಿಧಾನದಲ್ಲಿ ಸೂಕ್ತ ರಕ್ಷಣೆ ಹಾಗೂ ಹಲವು ಕಾನೂನುಗಳ ಜಾರಿ ಹೊರತಾಗಿಯೂ ಅಲ್ಪಸಂಖ್ಯಾತರಲ್ಲಿ ತಾರತಮ್ಯ ಮತ್ತು ಅಸಮಾನತೆಯ ಭಾವನೆ ಮುಂದುವರಿದಿದೆ. ಹೀಗಾಗಿ ಅಲ್ಪಸಂಖ್ಯಾತರನ್ನು ಸಂವಿಧಾನದ  46ನೇ ವಿಧಿ ಅಡಿಯಲ್ಲಿ ದುರ್ಬಲ ವರ್ಗವಾಗಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ 40 ಪುಟಗಳ ಪ್ರಮಾಣಪತ್ರದಲ್ಲಿ ಆಯೋಗ ಪ್ರತಿಪಾದಿಸಿದೆ.

ಧರ್ಮ ಆಧರಿತ ಜನಕಲ್ಯಾಣ ಯೋಜನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ.

- Advertisement -

ಸಮಾಜದಲ್ಲಿ ಬಹುಸಂಖ್ಯೆಯಲ್ಲಿರುವ ಸಮುದಾಯವು ಅಲ್ಪಸಂಖ್ಯಾತ ವರ್ಗವನ್ನು ನಿಯಂತ್ರಿಸುತ್ತದೆ. ಹೀಗಾಗಿ ಈ ವರ್ಗಕ್ಕೆ ಸರಕಾರ ವಿಶೇಷ ನಿಯಮಗಳನ್ನು ರೂಪಿಸುವುದು ಅತ್ಯಗತ್ಯ ಎಂದು ಆಯೋಗ ಹೇಳಿದೆ.

Join Whatsapp