ಜಾಮಿಯಾ ಶೂಟರ್ ರಾಮ್ ಭಕ್ತ ಗೋಪಾಲ್ ಗೆ ಜಾಮೀನು

Prasthutha|

ದೆಹಲಿ, ಆಗಸ್ಟ್ 3: ದೆಹಲಿಯ ಜಾಮಿಯಾ ಮಿಲ್ಲಿಯಾದಲ್ಲಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ಹಿಂದುತ್ವವಾದಿ ರಾಮ್ ಭಕ್ತ ಗೋಪಾಲ್ ಗೆ ದ್ವೇಷಪೂರಿತ ಭಾಷಣ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ.

- Advertisement -

ಪಟೌಡಿಯ ಮಹಾಪಂಚಾಯತ್ ನಲ್ಲಿ ಗೋಪಾಲ್ ಪ್ರಚೋದನಕಾರಿ ಭಾಷಣ ಮಾಡಿದ್ದಾನೆಂದು ಆರೋಪಿಸಲಾಗಿದೆ. ಮಾತ್ರವಲ್ಲ ಗೋಪಾಲ್ ತನ್ನ ಭಾಷಣದಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ದಾಳಿ ನಡೆಸುವಂತೆ ಕರೆ ನೀಡಿದ್ದ.

ಗೋಪಾಲ್ನ ಈ ರೀತಿಯ ಹೇಳಿಕೆಯಿಂದಾಗಿ ಸಮಾಜವನ್ನು ಅಪಾಯಕ್ಕೆ ತಂದೊಡ್ಡಬಹುದು ಮತ್ತು ಕೋಮುಗಲಭೆಯಾಗಿ ಪರಿವರ್ತನೆ ಆಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪಟೌಡಿಯ ನ್ಯಾಯಾಧೀಶರು ಉಲ್ಲೇಖಿಸಿ ಆತನಿಗೆ ಜಾಮೀನು ನಿರಾಕರಿಸಿದ್ದರು. ಈ ಮಧ್ಯೆ ಸೋಮವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಗೋಪಾಲ್ ಗೆ ಜಾಮೀನು ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

- Advertisement -

ಜನವರಿ 30 2020 ರಲ್ಲಿ ಜಾಮೀಯಾ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿತ್ತು. ಆರೋಪಿಗಳು ತನ್ನ ಹಳ್ಳಿಯಿಂದ ಪಿಸ್ತೂಲ್ ಅನ್ನು ಖರೀದಿಸಿ ಚಂದನ್ ಗುಪ್ತಾ ಸಾವಿಗೆ ಸೇಡು ತೀರಿಸಿಕೊಳ್ಳಲು ಬಸ್ಸಿನಲ್ಲಿ ದೆಹಲಿಗೆ ಹೊರಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಜಾಮೀಯಾ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಗುಂಡು ಹಾರಿಸಲಾಗಿತ್ತು

Join Whatsapp