ಸಚಿವ ಸುರೇಶ್‌ ಕುಮಾರ್‌ ಆಪ್ತ ಸಹಾಯಕ ಕೊರೋನಾಗೆ ಬಲಿ

Prasthutha|

►ಆಕ್ಸಿಜನ್ ಕೊರತೆಯೇ ಸಾವಿಗೆ ಕಾರಣ

- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಳವಾಗುವುದರಿಂದ ಆಕ್ಸಿಜನ್‌ ಕೊರತೆ ಉಂಟಾಗಿದ್ದು, ಕೊರೊನಾ ಸೋಂಕಿಗೆ ತುತ್ತಾಗಿದ್ದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರ ಪಿಎ ರಮೇಶ್‌ ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಸೈಂಟ್ ಜಾನ್ಸ್‌ ಆಸ್ಪತ್ರೆಯಲ್ಲಿ ರಮೇಶ್‌ ಮೃತಪಟ್ಟಿದ್ದು, ಸೂಕ್ತ ಸಮಯದಲ್ಲಿ ಆಕ್ಸಿಜನ್‌ ಸಿಗದಿರುವುದೇ ಅವರ ಸಾವಿಗೆ ಕಾರಣ ಎನ್ನಲಾಗುತ್ತಿದೆ.

- Advertisement -

ತಮ್ಮ ಆಪ್ತ ಸಹಾಯಕನ ನಿಧನಕ್ಕೆ  ಸಂತಾಪ ವ್ಯಕ್ತಪಡಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ತಮ್ಮ ಕ್ಷೇತ್ರದ ಹಲವಾರು ಮಂದಿ ರೋಗಿಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ದಾಖಲಿಸಲು, ಶುಶ್ರೂಶೆ ಪಡೆಯಲು ಸದಾ ನೆರವಾಗುತ್ತಿದ್ದ ರಮೇಶ್ ಅವರಿಗೆ ಇತ್ತೀಚೆಗೆ ಕೊರೋನಾ ಸೋಂಕು ತಗಲಿತ್ತು. ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳಲಾರಂಭಿಸಿದ್ದರು. ಭಾನುವಾರ ಸಂಜೆಯಷ್ಟೇ ದೂರವಾಣಿ ಮೂಲಕ ಮಾತನಾಡಿದ್ದೆನಾದರೂ ಇಂದು ಮುಂಜಾನೆ ಅವರ ಮೃತಪಟ್ಟ ಸುದ್ದಿ ಕೇಳಿ ಆಘಾತವಾಗಿದೆ ಎಂದು  ತಿಳಿಸಿದ್ದಾರೆ.

Join Whatsapp