ಕಾಣಿಯೂರು ಜವಳಿ ವ್ಯಾಪಾರಿಗಳ‌ ಮೇಲೆ  ಭೀಕರ ಹಲ್ಲೆ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಎಸ್ ಅಂಗಾರ ಮಾರಣಾಂತಿಕ ಹಲ್ಲೆಗೊಳಗಾದವರನ್ನೂ ಭೇಟಿಯಾಗಲಿ: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹಿಂ

Prasthutha|

ಮಂಗಳೂರು:  ತಮ್ಮ ಜೀವನದ ವೃತ್ತಿಯಾದ ಜವಳಿ ವ್ಯಾಪಾರವನ್ನು ಮಾಡಲು ಹೋದ ಎರಡು ವ್ಯಾಪಾರಸ್ಥರ ಮೇಲೆ ನಡೆದ ನೈತಿಕ ಪೋಲೀಸ್ ಗಿರಿ ನಡೆಸಿದ್ದನ್ನು ಖಂಡಿಸುತ್ತೇನೆ ಎಂದು ಮಾಜೀ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹಿಂ ಹೇಳಿದರು.

- Advertisement -

ಒಂದು ವೇಳೆ ಅವರು ತಪ್ಪು ಮಾಡಿದ್ದಲ್ಲಿ ಅವರಿಗೆ ಕಾನೂನಿನ ಮುಖಾಂತರ ಶಿಕ್ಷೆಯಾಗಲಿ.‌ನಿಷ್ಪಕ್ಷವಾದ ತನಿಖೆ ನಡೆಯಲಿ. ಅಂಗಾರರವು ದೂರದಾರ ಮಹಿಳೆಯ ಮನೆಗೆ ಭೇಟಿ ನೀಡಿ  ಕ್ರಮ ಕೈಗೊಳ್ಳುತ್ತೇವೆ ಅನ್ನುತ್ತಾರೆ, ಹಾಗೆಯೇ ನೈತಿಕ ಪೋಲೀಸ್ ಗಿರಿ ಮೂಲಕ ಹಲ್ಲೆಗೊಳಗಾದವರನ್ನು ಭೇಟಿಯಾಗಲಿ, ಸತ್ಯಾಂಶವನ್ನು ಅರಿಯಲಿ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಲಿ. ನೈತಿಕ ಪೋಲೀಸ್ ಗಿರಿ ಬಗ್ಗೆ ಯಾವುದೇ ಮಾತನಾಡದ ಸಚಿವರ ನಡೆ ನೈತಿಕ ಪೋಲೀಸ್ ಗಿರಿಗೆ ಪರೋಕ್ಷವಾಗಿ ಬೆಂಬಲಿಸುವಂತೆ ಕಾಣುತ್ತಿದೆ.  ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಲಿ.

ಮಾನ್ಯ ಪುತ್ತೂರು ಡಿ.ವೈ.ಎಸ್ಪಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ  ದೇಶದ ಕಾನೂನು ಉಲ್ಲಂಘಿಸಿ ನಡೆಯುವ ಅನೈತಿಕ ಪೋಲಿಸ್ ಗಿರಿ ಮಾಡುವರನ್ನು ಕೂಡಲೇ ಬಂಧಿಸಿ  ಜೈಲಿಗಟ್ಟಬೇಕು. ಮತ್ತು ಇನ್ನು ಮುಂದೆ ಇಂತಹ ಅಮಾನವೀಯ ಘಟನೆ ನಡೆಯದಂತೆ  ಸೂಕ್ತ  ಕಾನೂನು  ಕ್ರಮ ಜರುಗಿಸಬೇಕೆಂದು  ವಿನಂತಿಸುತ್ತಿದ್ದೇನೆ… ಸಾರ್ವಜನಿಕರು ಯಾವುದೇ ರೀತಿಯಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಸರ್ವರೂ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಎಂದರು.

Join Whatsapp