ಎಎಸ್ಐಯಿಂದ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಬಡ್ತಿ ಪಡೆಯಲು ಇದ್ದ ಕನಿಷ್ಠ ಸೇವಾವಧಿ ವರ್ಷ ಕಡಿತ: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಧ್ಯಕ್ಷತೆ ವಹಿಸಿದ ಇಂದಿನ ಸಂಪುಟ ಸಭೆಯಲ್ಲಿ, ಗೃಹ ಇಲಾಖೆಯಿಂದ ಪ್ರಸ್ತಾಪಿತ ವಾದ, A.S.I ಸಿಬ್ಬಂದಿಗಳಿಗೆ, ಮುಂದಿನ ಶ್ರೇಣಿಗೆ ಬಡ್ತಿ ಪಡೆಯಲು ಪ್ರಸ್ತುತ ಇದ್ದ 5 ವರ್ಷಗಳ ಕನಿಷ್ಠ ಸೇವಾ ಅವಧಿಯನ್ನು ನಾಲ್ಕು ವರ್ಷಗಳಿಗೆ ಇಳಿಸಲು ಒಪ್ಪಿಗೆ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಸಂಬಂಧ ಗೃಹ ಇಲಾಖೆಯಿಂದ ಪ್ರಸ್ತಾಪವನ್ನು ಸಲ್ಲಿಸಲಾಗಿತ್ತು.
A.S.I ಶ್ರೇಣಿಯ ಅಭ್ಯರ್ಥಿಗಳಿಗೆ ಮುಂಬಡ್ತಿ ಪಡೆಯಲು, ಈ ನಿರ್ಧಾರ ಸಹಾಯಕ ವಾಗಲಿದೆ. ಗೃಹ ಇಲಾಖೆಯ ಇನ್ನೊಂದು ಪ್ರಸ್ತಾವನೆ ಯಾದ, ಪೊಲೀಸ್ ಸಿಬ್ಬಂದಿಗಳಿಗೆ, ರೂಪಾಯಿ 14.5 ಕೋಟಿ ವೆಚ್ಚದಲ್ಲಿ, ಇಲಾಖೆಯ ನಿಸ್ತಂತು ಸಂಪರ್ಕ ಜಾಲಕ್ಕೆ ಆಧುನಿಕ ಸ್ಪರ್ಶ ನೀಡಿ ಮೇಲ್ದರ್ಜೆಗೇರಿಸುವ ಯೋಜನೆಗೆ ಇಂದಿನ ಸಚಿವ ಸಂಪುಟದ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp