ಅಸ್ಸಾಂ ದಾಲ್ಪುರಕ್ಕೆ ಎಡಪಕ್ಷಗಳ ನಿಯೋಗ ಭೇಟಿ: ಸಂತ್ರಸ್ತ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ವಿತರಣೆ

Prasthutha|

ಅಸ್ಸಾಂ: 1,170 ಕುಟುಂಬಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಅಸ್ಸಾಂ ಸರ್ಕಾರ ನಡೆಸಿದ ಪೊಲೀಸ್ ಕಾರ್ಯಾಚರಣೆಯಲ್ಲಿ ಇಬ್ಬರು ಗುಂಡಿಗೆ ಬಲಿಯಾಗಿದ್ದ ದರ್ರಾಂಗ್ ಜಿಲ್ಲೆಯ ದಾಲ್ಪುರ ಪ್ರದೇಶದಕ್ಕೆ ಎಐಕೆಎಸ್ ಹಾಗೂ ಎಐಎಡಬ್ಲ್ಯೂಯು ಹಾಗೂ ಎಐಎಲ್ಯು ಸಂಘದ ಮುಖಂಡರ ನಿಯೋಗ ಭೇಟಿ ನೀಡಿತ್ತು.

- Advertisement -


ಈ ಸಂದರ್ಭದಲ್ಲಿ ಮೃತರಾದ ವಾರಸುದಾರರಿಗೆ ಎಐಕೆಎಸ್ ನಿಂದ ತಲಾ ಒಂದು ಲಕ್ಷ ರೂ.ಗಳನ್ನು ನೀಡಲಾಯಿತು. ಘಟನೆಯಲ್ಲಿ ಗಾಯಗೊಂಡವರಿಗೂ ಕೂಡ ನೆರವು ಒದಗಿಸಲಾಯಿತು. ಗುಂಡಿನ ದಾಳಿ ಹಾಗೂ ಲಾಠಿ ಏಟಿಗೆ ವೃದ್ದರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.


ನಿಯೋಗದಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಜಂಟಿ ಕಾರ್ಯದರ್ಶಿ ಹಾಗೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)- ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಡಾ. ವಿಜ್ಜುಕೃಷ್ಣನ್, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಟನೆ(ಎಐಎಡಬ್ಲ್ಯುಯು) ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಸಂಸದ ಡಾ.ವಿ.ಶಿವದಾಸನ್, ಅಖಿಲ ಭಾರತ ಲಾಯರ್ಸ್ ಯೂನಿಯನ್ (ಎಐಎಲ್ಯು) ಅಧ್ಯಕ್ಷರು ಹಾಗೂ ರಾಜ್ಯಸಭೆ ಸಂಸದ ವಿಕಾಸ್ ರಂಜನ್ ಭಟ್ಟಾಚಾರ್ಯ, ಅಸ್ಸಾಂ ಕೃಷಿಕ್ ಸಭಾ ಅಧ್ಯಕ್ಷ ಗಜೆನ್ ಬರ್ಮಾನ್, ಖಜಾಂಚಿ ಮಸದ್ದಾರ್ ಹುಸೇನ್, ಅಸ್ಸಾಂ ಎಐಎಲ್ಯು ಕಾರ್ಯದರ್ಶಿ ಎ ಆರ್ ಸಿಕ್ದರ್ ಹಾಗೂ ಇತರರು ಭೇಟಿ ನೀಡಿದ್ದರು.

- Advertisement -


ದಶಕಗಳಿಂದ ವಾಸವಿದ್ದ ಇವರೆಲ್ಲರೂ ಸಂಬಂಧಿಸಿದ ದಾಖಲಾತಿಗಳು ಇಟ್ಟುಕೊಂಡಿದ್ದು, ತೆರಿಗೆ ಪಾವತಿಸುತ್ತಿದ್ದರೂ, ತಮ್ಮ ದೈನಂದಿನ ಅಗತ್ಯಗಳಿಗಾಗಿ ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ರೇಷನ್ ಅಂಗಡಿಗಳನ್ನು ಕಟ್ಟಿಕೊಂಡಿದ್ದರೂ ಈಗ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಇವರೆಲ್ಲರನ್ನೂ ಕಾನೂನು ಬಾಹಿರ ಒತ್ತುವರಿದಾರರು ಎಂದು ಹೇಳುತ್ತಿದೆ. ವಿಶೇಷವಾಗಿ ಮುಸ್ಲಿಮ್ ರೈತರೇ ಉಳುಮೆ ಮಾಡುತ್ತಿರುವ ಈ ಪ್ರದೇಶದಲ್ಲಿ ಈ ರೀತಿ ಒಕ್ಕಲೆಬ್ಬಿಸುವಿಕೆ ಪ್ರಯತ್ನವು ಕೋಮು ಧ್ರುವೀಕರಣ ಉಂಟು ಮಾಡುವ ದುರುದ್ದೇಶ ಎಂದು ಕಾಣುತ್ತಿದೆ. ಬೇರೆ ಇತರೆ ಪ್ರದೇಶಗಳಲ್ಲಿ ಅದಿವಾಸಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ರೈತರ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಬಹುದೊಡ್ಡ ಪಿತೂರಿಯ ಭಾಗವಾಗಿದೆ .ಆಳುವ ಸರ್ಕಾರದ ಇಂತಹ ಕ್ರಮವನ್ನು ಒಗ್ಗಟ್ಟಿನಿಂದ ಎಲ್ಲಾ ವಿಭಾಗದ ರೈತರು ಇದನ್ನು ಪ್ರತಿರೋಧಿಸಲು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.

Join Whatsapp