ಉಪ್ಪಿನಂಗಡಿ: ವಿಶ್ವೋತ್ತರ ಪಂಡಿತ ಶಂಸುಲ್ ಉಲಮಾ ಉಸ್ತಾದರು ಕೊನೆಯ ತನಕ ಬುಖಾರಿ ಗ್ರಂಥ ತರಗತಿ ನಡೆಸಿದ್ದ ಜಾಮಿಅ ದಾರುಸ್ಸಲಾಂ ನಂದಿ ಇದರ ಸನದು ದಾನದ ಪ್ರಯುಕ್ತ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಆಶ್ರಯದಲ್ಲಿ ಸಮಸ್ತದ ಪೋಷಕ ಸಂಘಟನೆಗಳ ಸಹಕಾರದೊಂದಿಗೆ ಮಾಣಿ ಜನಪ್ರಿಯ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ಶಬೇ ಮಿಹ್ರಾಜ್ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಬೃಹತ್ ಸುನ್ನೀ ಸಮಾವೇಶವನ್ನು ಯಶಸ್ಸುಗೊಳಿಸಲು ಉಪ್ಪಿನಂಗಡಿ ಕೇಂದ್ರ ಮಸೀದಿಯ ಸಭಾಂಗಣದಲ್ಲಿ ನಡೆದ ಸಮಸ್ತದ ವಿವಿಧ ಪೋಷಕ ಸಂಘಟನೆಗಳ ಕಾರ್ಯಕರ್ತರ ಸಭೆಯಲ್ಲಿ ಕರೆ ನೀಡಲಾಯಿತು.
ಸಭೆಯನ್ನುದ್ದೇಶಿಸಿ ಜಮಾತ್ ಅಧ್ಯಕ್ಷ ಹಾಜಿ ಮುಸ್ತಪ ಕೆಂಪಿ ಮಾತನಾಡಿ, ಕರ್ನಾಟಕದಲ್ಲಿ ಪೂರ್ವ ಕಾಲದಲ್ಲಿ “ಸಮಸ್ತ ‘ದ ಕಾರ್ಯ ಚಟುವಟಿಕೆಯಲ್ಲಿ ದಾರಿಮಿ ಉಲಮಾಗಳೇ ಸಕ್ರಿಯರಾಗಿದ್ದರು. ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ ದಾರಿಮಿಗಳ ಸಾಮಾಜಿಕ ಕೊಡುಗೆ ಅಪಾರ ಎಂದರು.
ಸ್ಥಳೀಯ ಮುದರ್ರಿಸ್ ಸಲಾಂ ಪೈಝಿ ಮಾತನಾಡಿ, ಸಾವಿರಾರು ಜನ ಸೇರುವ ಮಿಹ್ರಾಜ್ ಮಜ್ಲಿಸ್ ಕಾರ್ಯಕ್ರಮ ಆಧ್ಯಾತ್ಮಿಕ ಚೈತನ್ಯ ಹೆಚ್ವಿಸಲು ಸಹಕಾರಿಯಾಗಿದೆ ಎಂದರು.
ರಾಜ್ಯ ಉಲಮಾ ಒಕ್ಕೂಟದ ಎಸ್ ಬಿ ದಾರಿಮಿ ಮಾತನಾಡಿ, ಹಣ ಅಂತಸ್ತು ಎಲ್ಲಾ ಇದ್ದರೂ ಜನರಿಗೆ ನೆಮ್ಮದಿ ಇಲ್ಲದಾಗಿದೆ. ಮನಶಾಂತಿಗಾಗಿ ಪ್ರಾರ್ಥನೆಯೇ ದೊಡ್ಡ ಅಸ್ತ್ರ .ಶಬೇ ಮಿಹ್ರಾಜ್ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಆಗಮಿಸುವಂತೆ ಆಹ್ವಾನಿಸಿದರು.
ಹೈದರ್ ದಾರಿಮಿ ಕರಾಯ ,ಹುಸೈನ್ ದಾರಿಮಿ ರೆಂಜಲಾಡಿ ಶುಭ ಹಾರೈಸಿದರು.
ಶುಕೂರ್ ಹಾಜಿ, ಇಸ್ಮಾಯಿಲ್ ತಂಙಲ್, ಅಶ್ರಪ್ ಹಾಜಿ ಸಿಟಿ, ಯೂಸುಫ್ ಹಾಜಿ ಪೆದ್ಮಲೆ, ಆದಂ ದಾರಿಮಿ ಅಜ್ಜಿಕಟ್ಟೆ, ಇಸ್ಮಾಯಿಲ್ ದಾರಿಮಿ ಕೋಡಿಯಾಡಿ, ಉಸ್ಮಾನ್ ದಾರಿಮಿ ಹಳೆಗೇಟು , ಶುಕೂರ್ ಹಾಜಿ ಮೈನ, ಮುಹಮ್ಮದ್ ಕೂಟೇಲ್, ಮುಹಮ್ಮದಲಿ ಉಸ್ತಾದ್ ಜೊಗಿಬೆಟ್ಟು, ಹನೀಪ್ ದಾರಿಮಿ ನೆಕ್ಕಿಲಾಡಿ, ಶಬೀರ್ ಕೆಂಪಿ, ಇರ್ಷಾದ್ ಯುಟಿ, ಅಶ್ರಪ್ ಅಗ್ನಾಡಿ, ಅಬ್ಬಾಸ್ ಕುಂತೂರು ಮೊದಲಾದ ಹಲವು ಉಲಮಾ ಉಮರಾ ಗಣ್ಯರು ಉಪಸ್ಥಿತರಿದ್ದರು. ಅಲ್ ಬಿರ್ರ್ ರಾಜ್ಯ ಕೊರ್ಡಿನೇಟರ್ ಶುಕೂರ್ ದಾರಿಮಿ ಕರಾಯ ಸ್ವಾಗತಿಸಿದರು.