ಪಿಲ್ಲರ್ ಉರುಳಿ ಬಿದ್ದು ತಾಯಿ-ಮಗು ಸಾವು ಪ್ರಕರಣ| ಮೆಟ್ರೋ ಎಂಡಿ ವಿಚಾರಣೆ

Prasthutha|

ಬೆಂಗಳೂರು: ಮೆಟ್ರೋ ಪಿಲ್ಲರ್ ಉರುಳಿ ಬಿದ್ದು ತಾಯಿ-ಮಗು ಸಾವು ಪ್ರಕರಣ ಕುರಿತು ಮೆಟ್ರೋ ಎಂಡಿ ಅಂಜುಂ ಪರ್ವೇಜ್​ರನ್ನು ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ.

- Advertisement -

 ಐ ಐ ಟಿ ವರದಿಯ ಆಧಾರದ ಮೇರೆಗೆ 30 ಪ್ರಶ್ನೆಗಳನ್ನು ಕೇಳಿದ ಪೊಲೀಸರು, ಕಾಮಗಾರಿಗೆ ಸಂಬಂಧಪಟ್ಟ ಇಂಜಿನಿಯರ್ಸ್​ಗಳಿಗೆ ಟ್ರೈನಿಂಗ್ ಕೊಟ್ಟಿದ್ದು ಯಾರು?, ಟ್ರೈನಿಂಗ್ ಪ್ರೊಸೆಸ್‌ ಯಾವ ರೀತಿಯಲ್ಲಿತ್ತು?, ಮೆಟ್ರೋ ಪಿಲ್ಲರ್ ಡಿಸೈನ್​ ಯಾರು ಮಾಡಿದ್ರು..?, ಆ ಒಂದು ಪಿಲ್ಲರ್ ಮಾತ್ರ ಬೀಳೋದಕ್ಕೆ ಪ್ರಮುಖ ಕಾರಣ ಏನು..? ಹೀಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರ ಜೊತೆಗೆ ಕೆಲ‌ ಡಾಕ್ಯೂಮೆಂಟ್ಸ್​ಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.  

ಪತಿಯೊಂದಿಗೆ ಬೈಕ್‌ನಲ್ಲಿ ಬೆಂಗಳೂರಿನ ನಾಗವಾರ ಬಳಿ ತೆರಳುತ್ತಿರುವ ಸಂದರ್ಭದಲ್ಲಿ ನಿರ್ಮಾಣ ಹಂತದ 40 ಅಡಿ ಎತ್ತರದ ಮೆಟ್ರೋ ಪಿಲ್ಲರ್‌ ಕುಸಿದು ತೇಜಸ್ವಿನಿ (29) ಹಾಗೂ ಇವರ ಪುತ್ರ ವಿಹಾನ್‌ (2.5) ಮೃತಪಟ್ಟಿದ್ದರು.



Join Whatsapp