ಮೇಘಾಲಯ: ಬಿಜೆಪಿಯಿಂದ ಸ್ಪರ್ಧಿಸಲಿರುವ ಮಾಜಿ ಉಗ್ರಗಾಮಿ ನಾಯಕ!

Prasthutha|

►ವೇಶ್ಯಾವಾಟಿಕೆ ನಡೆಸುತ್ತಿದ್ದ ಬಿಜೆಪಿ ಅಭ್ಯರ್ಥಿ ಬರ್ನಾರ್ಡ್ ಎನ್. ಮರಕ್

- Advertisement -

ಶಿಲ್ಲಾಂಗ್: ಮೇಘಾಲಯದ ದಕ್ಷಿಣ ತುರಾ ಕ್ಷೇತ್ರದಲ್ಲಿ
ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ವಿರುದ್ಧ ಬಿಜೆಪಿ ತನ್ನ ರಾಜ್ಯ
ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಬಂಡುಕೋರ ನಾಯಕ
ಬರ್ನಾರ್ಡ್ ಎನ್ ಮರಕ್ ಎಂಬುವವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಗುರುವಾರ ಘೋಷಿಸಿದೆ.

ತುರಾದಲ್ಲಿರುವ ತನ್ನ ಫಾರ್ಮ್‌ಹೌಸ್‌ನಲ್ಲಿ ಮಾನವ ಕಳ್ಳಸಾಗಣೆ ಮತ್ತು
ವೇಶ್ಯಾವಾಟಿಕೆಯನ್ನು ಅವರು ನಡೆಸುತ್ತಿದ್ದರು ಎನ್ನಲಾಗಿದೆ.

- Advertisement -

ಕಳೆದ ವರ್ಷ ಅವರ ಫಾರ್ಮ್‌ಹೌಸ್‌ನಲ್ಲಿ ಆರು ಅಪ್ರಾಪ್ತ ವಯಸ್ಕರು ಮತ್ತು 500 ಕ್ಕೂ ಹೆಚ್ಚು ಬಳಕೆಯಾಗದ
ಕಾಂಡೋಮ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಗಾರೋ ಬುಡಕಟ್ಟು ಜನಾಂಗಕ್ಕೆ ಪ್ರತ್ಯೇಕ ರಾಜ್ಯ ಪಡೆಯುವ ಸಶಸ್ತ್ರ ಉಗ್ರಗಾಮಿ ಗುಂಪು ‘ಅಚಿಕ್ ರಾಷ್ಟ್ರೀಯ ಸ್ವಯಂ ಸೇವಕ
ಮಂಡಳಿ’ಯಲ್ಲಿ ಬರ್ನಾರ್ಡ್ ಇದ್ದರು. 2014 ರಲ್ಲಿ ಶಸ್ತ್ರಾಸ್ತ್ರ
ತ್ಯಜಿಸಿ, ಸಂಘಟನೆಯನ್ನು ವಿಸರ್ಜಿಸಲಾಗಿತ್ತು.

ಬಿಜೆಪಿಯು ಮೇಘಾಲಯ ವಿಧಾನಸಭೆಯ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಗುರುವಾರ ತನ್ನ ಎಲ್ಲಾ
ಅಭ್ಯರ್ಥಿಗಳನ್ನೂ ಬಿಜೆಪಿ ಪ್ರಕಟಿಸಿದ್ದು, ಅದರಲ್ಲಿ ಬರ್ನಾರ್ಡ್ ಅವರ ಹೆಸರೂ ಇದೆ.



Join Whatsapp