ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ ಪಕ್ಷ ಸೇರಿದಂತೆ ಅಲ್ಲ: ಎಂಪಿ ರೇಣುಕಾಚಾರ್ಯ

Prasthutha|

ದಾವಣಗೆರೆ: ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ ಪಕ್ಷ ಸೇರಿದಂತೆ ಅಲ್ಲ ಎಂದು ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

- Advertisement -

ಬಿಎಸ್ ಯಡಿಯೂರಪ್ಪ ಅದರ್ಶ ಅನ್ನುತ್ತಲೇ ಕಾಂಗ್ರೆಸ್ ಕಡೆ ಮುಖಮಾಡಿ ನಿಂತಿದ್ದೀರಲ್ಲ ಅಂತ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಕೋಪಗೊಂಡ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಹೋಗುವುದು, ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವುದರ ಅರ್ಥ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಅಂತ ಅಲ್ಲ ಎಂದು ಅವರು ಹೇಳಿದರು.

ಎಸ್ ಎಸ್ ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ, ಅಡಕೆ ಬೆಳೆ ನಶಿಸುತ್ತಿರವುದರಿಂದ ಭದ್ರಾನಾಲೆಗೆ ನೀರು ಹರಿಸುವಂತೆ ಮನವಿ ಮಾಡಲು ಅವರಲ್ಲಿಗೆ ಹೋಗಿದ್ದಾಗಿ ರೇಣುಕಾಚಾರ್ಯ ಹೇಳಿದರು.

- Advertisement -

 ಮಲ್ಲಿಕಾರ್ಜುನ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೊದಲಾದವರೆಲ್ಲ ಸರ್ಕಾರದ ಭಾಗವಾಗಿದ್ದಾರೆ. ಕ್ಷೇತ್ರದ ಕೆಲಸಗಳ ಸಲುವಾಗಿ ಅವರನ್ನು ಭೇಟಿಯಾಗಬೇಕಾಗುತ್ತದೆ. ಭೇಟಿ ಮಾಡಿದಾಕ್ಷಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆ ಅಂತ ಭಾವಿಸುವುದು ತಪ್ಪು ಎಂದು ರೇಣುಕಾಚಾರ್ಯ ಹೇಳಿದರು.

Join Whatsapp