ದೆಹಲಿ ಹತ್ಯಾಕಾಂಡದಲ್ಲಿ ದೃಷ್ಟಿ ಕಳೆದುಕೊಂಡಿದ್ದೇನೆ; ನ್ಯಾಯದ ನಿರೀಕ್ಷೆಯಿಲ್ಲ: ಗಲಭೆ ಸಂತ್ರಸ್ತ ಶಾರುಖ್ ಅಳಲು

Prasthutha|

ಆಗ್ರಾ: 2020 ರಲ್ಲಿ ನಡೆದ ಭೀಕರ ದೆಹಲಿ ಹತ್ಯಾಕಾಂಡದಲ್ಲಿ ನನ್ನ ದೃಷ್ಟಿ ನಷ್ಟ ಹೊಂದಿದ್ದು, ನ್ಯಾಯದ ಸಿಗುವ ಕುರಿತ ನಿರೀಕ್ಷೆಯನ್ನು ಕಳೆದುಕೊಂಡಿದ್ದೇನೆ ಎಂದು ಗಲಭೆ ಸಂತ್ರಸ್ತ ಶಾರುಖ್ ತನ್ನ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.

- Advertisement -

ಧಾರ್ಮಿಕ ಸಭೆಗೆ ತೆರಳಿ ಹಿಂದಿರುಗುತ್ತಿದ್ದ ಶಾರುಖ್ ಅವರ ಮೇಲೆ ದೊಂಬಿ ನಿರತ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಎಡ ಕಣ್ಣು ಕಳೆದುಕೊಂಡು ಶಾರುಖ್ ಭಾಗಶಃ ಅಂಧರಾಗಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ಮುಸ್ಲಿಮ್ ವಿರೋಧಿ ಹತ್ಯಾಕಾಂಡ ಭುಗಿಲೆದ್ದ ಫೆಬ್ರವರಿ 24, 2020 ರಂದು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಬಟ್ಟೆ ವ್ಯಾಪಾರಿಯಾದ ಶಾರುಖ್ ಎಂಬಾತನನ್ನು ಸಂಘಪರಿವಾರದ ಕಾರ್ಯಕರ್ತರು ಆಟೋ ರಿಕ್ಷಾದಿಂದ ಎಳೆದು ಹಾಕಿ ಕ್ರೂರವಾಗಿ ಹಲ್ಲೆ ನಡೆಸಿದ್ದರು.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತ ಶಾರುಖ್, ಆಟೋದಲ್ಲಿ ಪ್ರಯಾಣಿಸುತಿದ್ದಾಗ ನಮ್ಮ ಸಮೀಪಕ್ಕೆ ಮಾರಕಾಯುಧದೊಂದಿಗೆ ಆಗಮಿಸಿದ ಸಂಘಪರಿವಾರ ಕಾರ್ಯಕರ್ತರು, ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ದಾಂಧಲೆ ಆರಂಭಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ತಾನು ಧರಿಸಿದ ಟೋಪಿ ಮತ್ತು ವೇಷಭೂಷಣದಿಂದ ಆಕ್ರೋಶಿತಗೊಂಡ ಸಂಘಪರಿವಾರದ ಕಾರ್ಯಕರ್ತರು ನಮ್ಮ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದರು ಎಂದು ದೂರಿದ್ದಾರೆ.

ನಮ್ಮ ಮೇಲೆ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರು, ನಮ್ಮ ಮೇಲಿನ ಬಟ್ಟೆಗಳನ್ನು ಬಿಚ್ಚಿ ನಮ್ಮನ್ನು ಎಳೆದೊಯ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಶಾರುಖ್ ಬೇಸರದಿಂದ ತಿಳಿಸಿದ್ದಾರೆ.

ಘಟನೆಯ ಹದಿನೇಳು ದಿನಗಳ ಬಳಿಕ ಶಾರುಖ್’ಗೆ ಪ್ರಜ್ಞೆ ಬಂದಿತ್ತು ಎಂದು ಹೇಳಲಾಗಿದೆ.

Join Whatsapp