ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲ !

Prasthutha|

ವಡೋದರ: ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಕಾರಣ ಮೊಟ್ಟೆ, ಮೀನು ಸೇರಿದಂತೆ ಯಾವುದೇ ಮಾಂಸಾಹಾರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಾಣುವಂತೆ ಮಾರಾಟ ಮಾಡದಂತೆ ಗುಜರಾತ್’ನ ವಡೋದರ ಮುನ್ಸಿಪಾಲ್ ಕಾರ್ಪೊರೇಷನ್ ತನ್ನ ವ್ಯಾಪ್ತಿಯಲ್ಲಿ ಮೌಖಿಕ ಆದೇಶ ನೀಡಿದೆ ಎಂದು ವರದಿಯಾಗಿದೆ.

- Advertisement -

ರಸ್ತೆ ಬದಿಗಳಲ್ಲಿ ತಳ್ಳು ಗಾಡಿಗಳಲ್ಲಿ ಎಲ್ಲರಿಗೂ ಕಾಣುವಂತೆ ಮಾಂಸದಿಂದ ತಯಾರಿಸಿದ ಆಹಾರಗಳನ್ನು ಮಾರಾಟ ಮಾಡುವಂತಿಲ್ಲ. ಅಂಥಹ ಗಾಡಿಗಳನ್ನು ತೆರವುಗೊಳಿಸಲಾಗುವುದು ಹಾಗೂ ಹೊಟೇಲ್, ಅಂಗಡಿಗಳಲ್ಲಿ ಮೊಟ್ಟೆ,ಮೀನು ಅಥವಾ ಮಾಂಸದಿಂದ ತಯಾರಿಸಿರುವ ಆಹಾರಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಿರಬೇಕು ಎಂದು ವಡೋದರ ಮುನ್ಸಿಪಾಲ್ ಕಾರ್ಪೊರೇಷನ್’ನ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ ಈ ಸಂಬಂಧ ಮೌಖಿಕ ಸೂಚನೆ ನೀಡಿರುವುದಾಗಿ ಇಂಡಿಯನ್ ಎಕ್ಸ್’ಪ್ರೆಸ್, ದಿ ಕ್ವಿಂಟ್ ಸೇರಿದಂತೆ ಪ್ರಮುಖ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಇದಕ್ಕೂ ಮೊದಲು ಗುಜರಾತ್’ನ ರಾಜ್’ಕೋಟ್’ನಲ್ಲೂ ಮುಖ್ಯ ರಸ್ತೆಗಳನ್ನು ಹೊರತುಪಡಿಸಿ, ನಿಗದಿತ ಸ್ಥಳದಲ್ಲಿ ಮಾತ್ರವೇ ಮಾಂಸಾಹಾರ ಮಾರಾಟ ಮಾಡುವಂತೆ ಮೇಯರ್ ಸೂಚನೆ ನೀಡಿದ್ದರು. ಮಾಂಸದ ವಾಸನೆಯಿಂದಾಗಿ ಹಾಗೂ ಗಾಡಿಗಳಲ್ಲಿ ಕೊಳಿ ಖಾದ್ಯಗಳನ್ನು ನೇತಾಡಿಸುವುದರಿಂದ ರಸ್ತೆಯಲ್ಲಿ ಹೋಗುವ ಹೆಚ್ಚಿನವರಿಗೆ ತೊಂದರೆಯಾಗುತ್ತಿದೆ ಎಂದು ರಾಜ್’ಕೋಟ್’ನ ಮೇಯರ್ ಪ್ರದೀಪ್ ದೇವ್ `ಟೈಮ್ಸ್ ಆಫ್ ಇಂಡಿಯಾ’ಗೆ ಪ್ರತಿಕ್ರಿಯೆ ನೀಡುವ ವೇಳೆ ಹೇಳಿದ್ದಾರೆ.



Join Whatsapp