ಯಾರೇ ಸರ್ಕಾರ ಮಾಡಿದರೂ ತನ್ನ ಮನೆಬಾಗಿಲಿಗೆ ಬರಬೇಕೆಂಬ ಆಸೆ ನೆರವೇರಲಿಲ್ಲವೆಂದು ಹೆಚ್​ಡಿಕೆಗೆ ಬೇಸರ: ಸಚಿವ ಎಂ.ಸಿ.ಸುಧಾಕರ್

Prasthutha|

ಬೆಂಗಳೂರು: ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಿಚಾರವಾಗಿ ವಾಗ್ದಾಳಿ ನಡೆಸಿದ ಸಚಿವ ಎಂ.ಸಿ.ಸುಧಾಕರ್, ಯಾರೇ ಸರ್ಕಾರ ಮಾಡಿದರೂ ತನ್ನ ಮನೆಬಾಗಿಲಿಗೆ ಬರಬೇಕೆಂಬ ಆಸೆ ನೆರವೇರಲಿಲ್ಲವೆಂದು ಹೆಚ್​ಡಿಕೆ ಬೇಸರದಲ್ಲಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಹೆಚ್​​.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಆಸೆ ಇಟ್ಟುಕೊಂಡಿದ್ದರು. ಯಾರೇ ಸರ್ಕಾರ ಮಾಡಿದರೂ ಮನೆಬಾಗಿಲಿಗೆ ಬರಬೇಕೆಂಬ ಆಸೆ ಇತ್ತು. ಆಸೆ ನೆರವೇರಲಿಲ್ಲ ಅಂತಾ ಹೆಚ್​.ಡಿ.ಕುಮಾರಸ್ವಾಮಿ ಬೇಸರದಲ್ಲಿದ್ದಾರೆ. ಬೇಸರದಲ್ಲೇ ತಾನು ಅಸ್ತಿತ್ವದಲ್ಲಿದ್ದೇನೆ ಅಂತಾ ತೋರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಕುಮಾರಸ್ವಾಮಿ ದಿನಕ್ಕೊಂದು ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕುಮಾರಸ್ವಾಮಿ ಸಿಂಗಾಪುರದಿಂದ ಬಂದು ಒಂದು ಹೇಳಿಕೆ ಕೊಟ್ಟಿದ್ದರು. ಈಗ ಕಾಂಬೋಡಿಯಾಗೆ ಹೋಗಿದ್ದಾರೆ, ಅಲ್ಲಿ ಏನು ಹೇಳುತ್ತಾರೋ ಎಂದು ಹೇಳಿದರು.

Join Whatsapp