MBBS ಟಾಫರ್ ವಿದ್ಯಾರ್ಥಿ ಕಟ್ಟಡದಿಂದ ಹಾರಿ ಆತ್ಮಹತ್ಯೆ

Prasthutha|

ಬೀದರ್: ಬ್ರಿಮ್ಸ್ ಹಾಸ್ಟೆಲ್ ಮೇಲಿಂದ ಹಾರಿ ಎಂಬಿಬಿಎಸ್ ಟಾಫರ್ ಆಗಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

- Advertisement -


ನಗರದ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಶ್ರೀರಾಮ್ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ.
ಎಂಬಿಬಿಎಸ್ ಪ್ರಾಯೋಗಿಕ ಪರೀಕ್ಷೆಯ ಭಯದಲ್ಲಿ ಶ್ರೀರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.


ಮತ್ತೊಂದೆಡೆ ತಂದೆ ಸಾವಿನಿಂದ ಶ್ರೀರಾಮ್ ಮಾನಸಿಕವಾಗಿ ಕುಗ್ಗಿ ಹೋಗಿದ್ದು ಅದು ಕೂಡ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ನಿಖರವಾದ ಕಾರಣ ತಿಳಿದು ಬರಬೇಕಿದೆ.

- Advertisement -


ಮೂಲತಃ ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ತಾಲ್ಲೂಕಿನವನಾಗಿದ್ದ ಶ್ರೀರಾಮ್ ಎಂಬಿಬಿಎಸ್’ನಲ್ಲಿ ಟಾಪರ್ ಆಗಿದ್ದು ಆತನ ಸಾವಿಗೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Join Whatsapp