ಉಳ್ಳಾಲದ ಕ್ರೀಡಾ ಪ್ರೇಮಿಗಳು ಕ್ರಿಕೆಟ್ ಮೂಲಕ ಸಾರುವ ಶಾಂತಿ ಸೌಹಾರ್ದತೆಯ ಸಂದೇಶ ದೇಶಕ್ಕೆ ಮಾದರಿಯಾಗಲಿ: ರಿಯಾಝ್ ಫರಂಗಿಪೇಟೆ

Prasthutha|

ಉಳ್ಳಾಲ: ಉಳ್ಳಾಲದ ಕಡಲ ತಡಿಯ ಕ್ರೀಡಾ ಪ್ರೇಮಿಗಳು ಕ್ರಿಕೆಟ್ ಮೂಲಕ ಆಯೋಜಿಸುವ ಶಾಂತಿ ಸೌಹಾರ್ದತೆಯ ಸಂದೇಶ ದೇಶಕ್ಕೆ ಮಾದರಿಯಾಗಲಿ ಎಂದು SDPI ಮುಖಂಡ ರಿಯಾಝ್ ಫರಂಗಿಪೇಟೆ ಹಾರೈಸಿದ್ದಾರೆ. 

- Advertisement -

ಉಳ್ಳಾಲದ ರೋಯಲ್ ಗಾರ್ಡನ್ ನಲ್ಲಿ ಉಳ್ಳಾಲ ಪ್ರೀಮಿಯರ್ ಲೀಗ್ (UPL) ನ ಬಹುನಿರೀಕ್ಷಿತ ತಂಡವಾದ ರಾಯಲ್ ಚಾಲೆಂಜರ್ಸ್ ಉಳ್ಳಾಲ ತಂಡದ ಜೆರ್ಸಿ ಲಾಂಚ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಿಯಾಝ್ ಫರಂಗಿಪೇಟೆ ಅವರು ಮಾತನಾಡುತ್ತಿದ್ದರು.

ರಾಯಲ್ ಚಾಲೆಂಜರ್ಸ್ ತಂಡ, ಕ್ರೀಡೆಯಲ್ಲಿ ತೋರಿಸುವ ಆಸಕ್ತಿಯೂ ಮುಂಬರುವ ಪೀಳಿಗೆಗೆ ಮಾದರಿಯಾಗಲಿ.  ಅದೇ ರೀತಿ ಕೇವಲ ಕ್ರಿಕೆಟ್ ಮಾತ್ರವಲ್ಲ ಮಾನವೀಯ ಸೇವೆ, ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯಗಳ ವಿರುದ್ಧ ಹೋರಾಡುವ ಮತ್ತು ಅಂತಹ ಕಾರ್ಯಗಳಿಂದ ಸಮಾಜದಲ್ಲಿ ನಡೆಯುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯವು ನಡೆಯಬೇಕಾಗಿದೆ ಎಂದು ರಿಯಾಝ್ ಫರಂಗಿಪೇಟೆ ಕರೆ ನೀಡಿದರು.

- Advertisement -

ರಾಯಲ್ ಚಾಲೆಂಜರ್ಸ್ ತಂಡವು ಉಳ್ಳಾಲ ಪ್ರದೇಶ ಜನರೊಂದಿಗಿರುವ ಒಡನಾಟ ಮತ್ತು ಸಮಾಜ ಸೇವೆಯ ಮೂಲಕ ಜನರ ಮನಸ್ಸು ಗೆದ್ದಿದ್ದು,  ಇವರ ಸೇವೆ ಸದಾ ಮುಂದುವರಿಯಲಿ ಎಂದು ಅವರು ಹಾರೈಸಿದರು

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ, ಉಳ್ಳಾಲ ನಗರ ಸಭೆಯ ಜೆಡಿಎಸ್ ಸದಸ್ಯರಾದ ಜಬ್ಬಾರ್, ಖಲೀಲ್, UH ಹಸೈನಾರ್, ಉಳ್ಳಾಲ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್, ಉಳ್ಳಾಲದ ರಾಜಕೀಯ ವಿಶ್ಲೇಷಕರು ಹಿರಿಯರೂ ಅದ ಇಬ್ರಾಹಿಂ, ಮತ್ತು ಉಳ್ಳಾಲ ಬಾಗದ ಕ್ರಿಕೇಟ್ ಪ್ರೇಮಿಗಳು ಉಪಸ್ಥಿತರಿದ್ದರು.

Join Whatsapp