ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ

Prasthutha|

ಯಾದಗಿರಿ: ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ.

- Advertisement -


ಶಹಾಪುರದ ಹುರುಸಗುಂಡಗಿ ಗ್ರಾಮದ ಯುವತಿ ಸುವರ್ಣ (20), ಈಶಪ್ಪ (22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ಗುರುತಿಸಲಾಗಿದೆ.


ಸುವರ್ಣ ಹಾಗೂ ಈಶಪ್ಪ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ವರ್ಷಗಳ ಹಿಂದೆ ಸುವರ್ಣ ಬೇರೆಯವನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ತನ್ನ ಗಂಡನ ಜೊತೆ ವಾಸವಾಗಿದ್ದಳು.
ಸುವರ್ಣ ತನ್ನ `ಗಂಡನಿಗೆ ಹೇಳದೆ ಬೆಂಗಳೂರಿನಿಂದ ಹುರುಸಗುಂಡಗಿ ಗ್ರಾಮಕ್ಕೆ ನಿನ್ನೆ ಬಂದಿದ್ದಳು. ಈಶಪ್ಪ ಹಾಗೂ ಸುವರ್ಣ ಇಡೀ ರಾತ್ರಿ ಜೊತೆಯಾಗಿದ್ದು ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Join Whatsapp