ತಮಿಳು ಭಾಷೆಯಲ್ಲಿ ಮ್ಯಾಕ್ಸ್ ವೆಲ್ ಮದುವೆ ಆಮಂತ್ರಣ !

Prasthutha|

ಚೆನ್ನೈ: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್’ವೆಲ್ ಅವರ ವಿವಾಹ ಆಮಂತ್ರಣ ಪತ್ರಿಕೆಯನ್ನು ತಮಿಳು ಭಾಷೆಯಲ್ಲಿ ಮುದ್ರಿಸಲಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

- Advertisement -

ಮ್ಯಾಕ್ಸ್ವೆಲ್ ವಿವಾಹವು ತಮಿಳುನಾಡು ಮೂಲದ ವಿನಿ ರಾಮನ್ ಅವರೊಂದಿಗೆ ಮಾರ್ಚ್ 27 ರಂದು ತಮಿಳು-ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ.

ಮ್ಯಾಕ್ಸ್ವೆಲ್-ವಿನಿ ರಾಮನ್ ವಿವಾಹದ ಆಮಂತ್ರಣ ಪತ್ರದ ಫೋಟೋವನ್ನು ಕಸ್ತೂರಿ ಶಂಕರ್ ಎಂಬವರು ಟ್ವೀಟ್ ಮಾಡಿದ್ದು “ವಿನಿ ರಾಮನ್ ಅವರನ್ನು ಮ್ಯಾಕ್ಸ್ ವೆಲ್ ವಿವಾಹವಾಗುತ್ತಿದ್ದಾರೆ. ಈ ಜೋಡಿಯ ಚೆಂದದ ತಮಿಳು ವಿವಾಹ ಪತ್ರಿಕೆ. ತಮಿಳು ಬ್ರಾಹ್ಮಣರ ಸಾಂಪ್ರದಾಯದಂತೆ ಇವರು ವಿವಾಹವಾಗಲಿದ್ದಾರೆ. ಅಭಿನಂದನೆ ಗ್ಲೆನ್ ಮತ್ತು ವಿನಿ’ ಎಂದು ಕಸ್ತೂರಿ ಶಂಕರ್ ಟ್ವೀಟ್ ಮಾಡಿದ್ದಾರೆ.

- Advertisement -

ಯಾರು ವಿನಿ ರಾಮನ್?

ವಿನಿ ರಾಮನ್ ಕುಟುಂಬ ಮೂಲತಃ ತಮಿಳುನಾಡಿನ ವೆಲ್ಲೂರ್’ ನವರು. ಆಸ್ಟ್ರೇಲಿಯಾದ ಪೌರತ್ವ ಪಡೆದಿರುವ ವಿನಿ, ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದಾರೆ. 2013ರಲ್ಲಿ ನಡೆದ ಮೆಲ್ಬೋರ್ನ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ

ವಿನಿ ಮೊದಲ ಬಾರಿಗೆ ಮ್ಯಾಕ್ಸ್ವೆಲ್’ರನ್ನು ಭೇಟಿಯಾಗಿದ್ದರು.  ಕಳೆದ 4 ವರ್ಷಗಳಿಂದ ಮ್ಯಾಕ್ಸ್-ವಿನಿ ಡೇಟಿಂಗ್ ನಡೆಸುತ್ತಿದ್ದಾರೆ.

Join Whatsapp