ವಿಶ್ವಸಂಸ್ಥೆಯ UNSAAT ತಂಡದಲ್ಲಿ ಸ್ಥಾನ ಪಡೆದ ಭಾರತದ 19 ಮಹಿಳಾ ಅಧಿಕಾರಿಗಳು

Prasthutha|

- Advertisement -

ಹೊಸದಿಲ್ಲಿ : ವಿಶ್ವಸಂಸ್ಥೆಯ UNSAAT ತಂಡದಲ್ಲಿ ಭಾರತದ 19 ಮಹಿಳಾ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ.

ವಿಶ್ವಸಂಸ್ಥೆಯ ಅಧೀನದಲ್ಲಿರುವ ಯುನೈಟೆಡ್ ನೇಷನ್ ಅಸಿಸ್ಟೆನ್ಸಿ ಮತ್ತು ಅಸ್ಸೆಸ್ಸೆಮೆಂಟ್ ಟೀಮ್ (UNSAAT) ಗೆ ಭಾರತದ 69 ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಶೇ.25 ಮಂದಿ ಅಂದರೆ 19 ಮಹಿಳಾ ಅಧಿಕಾರಿಗಳು ಇದೇ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಗೃಹ ಸಚಿವಾಲಯದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

- Advertisement -

ವಿದೇಶಗಳಲ್ಲಿ ಉಂಟಾಗುವ ಗಲಭೆ, ಕ್ಷೋಭೆ ಮತ್ತಿತರ ಕಾರ್ಯಾಚರಣೆಗಳಲ್ಲಿ ಈ ತಂಡವನ್ನು ಬಳಕೆ ಮಾಡಲಾಗುತ್ತದೆ. ಈ 69 ಅಧಿಕಾರಿಗಳಲ್ಲಿ ವಿವಿಧ ಅರೆಸೇನಾ ಪಡೆಗಳು, ಕೇಂದ್ರ ಪೊಲೀಸ್ ಸಂಸ್ಥೆಗಳು ಮತ್ತು ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸೇರಿದಂತೆ 19 ಮಹಿಳೆಯರು ಸ್ಥಾನ ಪಡೆದಿದ್ದಾರೆ.


ಈ 69 ಅರ್ಹ ಅಧಿಕಾರಿಗಳು ವಿವಿಧ ಸುತ್ತಿನ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ವಿಶ್ವಸಂಸ್ಥೆಯ ಮಿಷನ್ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಇವರು ವಾಹನ ನಿರ್ವಹಣೆ, ನಗರ ಸಂಚಾರ, ಕಂಪ್ಯೂಟರ್ ಕೌಶಲ್ಯ, ಸಾಮರ್ಥ್ಯ ಆಧಾರಿತ ಸಂದರ್ಶನ ಮತ್ತು ಶಸ್ತ್ರಾಸ್ತ್ರ ನಿರ್ವಹಣೆ ಒಳಗೊಂಡಿರುವ ವಿವಿಧ ಪರೀಕ್ಷೆಗಳನ್ನು ಎದುರಿಸಿದ್ದಾರೆ.

Join Whatsapp