ಕರಾವಳಿಯಲ್ಲಿ ಇಂದಿನಿಂದ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ: ಹೀಟ್ ವೇವ್ ಅಲರ್ಟ್ ವಾಪಸ್

Prasthutha|

ಬೆಂಗಳೂರು: ಕರಾವಳಿಯಲ್ಲಿ ಇಂದಿನಿಂದ ಗರಿಷ್ಠ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‍ ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

- Advertisement -

ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ನೀಡಿದ್ದ ಬಿಸಿ ಗಾಳಿ ಎಚ್ಚರಿಕೆಯನ್ನು ಇಲಾಖೆ ಹಿಂಪಡೆದಿದೆ.

ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಒಂದು ತಿಂಗಳ ಮುಂಚೆಯೇ ಆ ವಾತಾವರಣ ಉಂಟಾಗಿ ಇಲಾಖೆ ಉಷ್ಣ ಅಲೆಯ ಅಲರ್ಟ್ ನೀಡಿತ್ತು. ಆದರೆ ಉಷ್ಣಾಂಶ ಎರಡು ದಿನಗಳಿಗೆ ಸೀಮಿತಗೊಂಡಿದೆ.

Join Whatsapp