ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದು

Prasthutha|

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಿರ್ಣಾಯಕ ಐಪಿಎಲ್ ಪಂದ್ಯ ಭಾರಿ ಮಳೆಯಿಂದಾಗಿ ರದ್ದಾಗಿದೆ.

- Advertisement -

ಈ ಮೂಲಕ ಐಪಿಎಲ್ ನಲ್ಲಿ ಎರಡನೇ ಪಂದ್ಯ ರದ್ದಾಂತಾಗಿದೆ. ಹಿಂದೆ ಗುಜರಾತ್ ಮತ್ತು ಕೋಲ್ಕತಾ ನಡುವಿನ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿ 12 ಅಂಕ ಹೊಂದಿರುವ ಗುಜರಾತ್ ಅಧಿಕೃತವಾಗಿ ಹೊರ ಬಿದ್ದಿತ್ತು

ಇಂದಿನ1 ಅಂಕ ಸೇರಿ 15 ಅಂಕ ಹೊಂದಿರುವ ಸನ್​ರೈಸರ್ಸ್​​ ಹೈದರಾಬಾದ್​ ತಂಡ ಕಷ್ಟಪಡದೇ 2024ನೇ ಆವೃತ್ತಿಯ ಐಪಿಎಲ್​ನ ಪ್ಲೇಆಫ್​​ಗೆ ಪ್ರವೇಶಿಸಿದೆ. ಕೋಲ್ಕತಾ ಮತ್ತು ರಾಜಸ್ಥಾನದ ನಂತರ ಐಪಿಎಲ್ 2024 ರ ಪ್ಲೇಆಫ್​​ಗೆ ಅರ್ಹತೆ ಪಡೆದ ಮೂರನೇ ತಂಡ ಎಂಬ ಹೆಗ್ಗಳಿಕೆಗೂ ಎಸ್​ಆರ್​ಎಚ್​ ಪಾತ್ರವಾಯಿತು. 2020ರ ಬಳಿಕ ಇದೇ ಮೊದಲ ಬಾರಿಗೆ ಸನ್ರೈಸರ್ಸ್ ಪ್ಲೇ ಆಫ್ ಹಂತ ತಲುಪಿದೆ.

- Advertisement -

ಕ್ರೀಡಾಂಗಣದಲ್ಲಿ ತವರು ತಂಡವನ್ನು ಹುರಿದುಂಬಿಸಲು ದೊಡ್ಡ ಪ್ರಮಾಣದ ಪ್ರೇಕ್ಷಕರು ಇದ್ದರು. ಎಸ್‌ಆರ್​ಎಚ್​ ಪ್ಲೇಆಫ್​ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳಿಗಾಗಿ ಲಘು ಪ್ರದರ್ಶನ ಮತ್ತು ಸಂಗೀತ ಆಯೋಜಿಸಲಾಗಿತ್ತು.

2022 ರಲ್ಲಿ ಪ್ರಶಸ್ತಿ ಗೆದ್ದ ಮತ್ತು 2022 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಗುಜರಾತ್​ಗೆ ಈ ಐಪಿಲ್ ನಿರಾಶಾದಾಯವಾಗಿ‌ ಪರಿಣಮಿಸಿದೆ. ಮಳೆಯಿಂದಾಗಿ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಿದ ನಂತರ ಗುಜರಾತ್ ತನ್ನ ಋತುವನ್ನು ಕೊನೆಯ ನಾಲ್ಕರಲ್ಲಿ ಕೊನೆಗೊಳಿಸಬೇಕಾಯಿತು.



Join Whatsapp